ಸುದ್ದಿ ಸಂಕ್ಷಿಪ್ತ

ವಿಶ್ವ ಪ್ರಜ್ಞ ಕಾಲೇಜಿನಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ‘ವಿಜ್ಞಾನ ಮಾದರಿ’ ತಯಾರಿಸುವ ಸ್ಪರ್ಧೆ

ಮೈಸೂರು, ಅ.10: -ನಗರದ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವಕಾಲೇಜಿನ‘ದಿ ಎಸೆಸ್ಸ್’ ವಿಜ್ಞಾನ ಸಂಘ ಹಾಗೂ ಎಸ್‍ವಿಜಿ ಸ್ಪರ್ಧಾತ್ಮಕ ಪರೀಕ್ಷಾಘಟಕದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ವಿಶ್ವ ವಿಜ್ಞಾನ ದಸರಾ’ ಎಂಬ ವಿಜ್ಞಾನ ಮಾದರಿ ತಯಾರಿಸುವ ಸ್ಪರ್ಧೆಯನ್ನು  13 ಅಕ್ಟೋಬರ್ 2018, ಶನಿವಾರ ಬೆಳಿಗ್ಗೆ 9 ಗಂಟೆಗೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ.

ಈ ಕೆಳಕಂಡ ವಿಷಯಗಳಲ್ಲಿ ಸ್ಪರ್ಧಾರ್ಥಿಗಳು ಮಾದರಿಗಳನ್ನು ತಯಾರಿಸಬೇಕು

  1. ಭೌತಶಾಸ್ತ್ರ ಮತ್ತು ಅದಕ್ಕೆ ಸಂಬಂಧಪಟ್ಟ ವಿಜ್ಞಾನ , 2.ರಸಾಯನಶಾಸ್ತ್ರಮತ್ತುಅದಕ್ಕೆ ಸಂಬಂಧಪಟ್ಟ ವಿಜ್ಞಾನ 3.ಅನ್ವಯಿಕಗಣಿತ ಮತ್ತು ಸಂಖ್ಯಾಶಾಸ್ತ್ರ, 4. ಸಸ್ಯಶಾಸ್ತ್ರ ಮತ್ತು ಪರಿಸರ ವಿಜ್ಞಾನ, 5. ಜೀವ ವಿಜ್ಞಾನ ಮತ್ತುಜೆನೆಟಿಕ್ಸ್

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ‘ವಿಶ್ವ ವಿಜ್ಞಾನ ದಸರಾ ಯುವ ವಿಜ್ಞಾನಿ 2018’ ಎಂಬ ಪ್ರಶಸ್ತಿಯನ್ನು ನೀಡಲಾಗುವುದು. ಜೊತೆಗೆ ಶಾಲೆಗೆ ರೋಲಿಂಗ್ ಶೀಲ್ಡ್ ಅನ್ನು ನೀಡಲಾಗುವುದು. ಸ್ಪರ್ಧಾರ್ಥಿಗಳು ಉಚಿತ ಪ್ರವೇಶ ಹಾಗೂ ಸ್ಥಳದಲ್ಲೇ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9844688509 (ವ್ಯಾಟ್ಯಾಪ್ ನಂಬರ್) ಅಥವಾ E-mail: [email protected]/[email protected] ಸಂಪರ್ಕಿಸಬಹುದು (ಜಿ.ಕೆ,ಎಸ್.ಎಚ್)

Leave a Reply

comments

Related Articles

error: