ಪ್ರಮುಖ ಸುದ್ದಿಮೈಸೂರು

ಕರೆಯದೇ ಬಂದು ವೇದಿಕೆ ಏರಿ ಸುದ್ದಿಯಾದರು! : ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿ

ಮೈಸೂರು, ಅ.10:- ಮೈಸೂರು ದಸರಾ ಅಂದರೆ ಅದರ ಅಂದ, ಚಂದಾನೆ ಬೇರೆ, ಸಹಸ್ರಾರು ಮೈಲಿ ದೂರದಿಂದ ಪ್ರವಾಸಿಗರು ವೈಭವವನ್ನು ಕಣ್ತುಂಬಿಸಿಕೊಳ್ಳಲು ಬರುತ್ತಾರೆ. ಆದರೆ ಇವತ್ತು ದಸರಾ ಉದ್ಘಾಟನೆಯ ವೇಳೆ ಒಂದು ಅಚಾತುರ್ಯ ನಡೆದು ಹೋಗಿದೆ. ಪ್ರೋಟೋ ಕಾಲ್ ಗೆ ವಿರುದ್ಧವಾಗಿ ಅಪರಿಚಿತ ಮಹಿಳೆಯೋರ್ವರು ವೇದಿಕೆ ಏರಿ ಕುಳಿತು ಬಿಟ್ಟಿದ್ದು, ಇದಕ್ಕೆ  ಅಧಿಕಾರಿಗಳ ವೈಫಲ್ಯ ಕಾರಣವೇ ಎಂಬ ಪ್ರಶ್ನೆ ಎದ್ದಿದೆ.

ಇಂದು ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಕ್ಕೆ ವೈಭವೋಪೇತ ಚಾಲನೆ ನೀಡಲಾಯಿತು. ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿಯವರು ಚಾಲನೆ ನೀಡಿದರು. ಬಳಿಕ ಸಭಾ ಕಾರ್ಯಕ್ರಮ ನಡೆದಿದೆ. ಆದರೆ ಎಷ್ಟೋ ಜನಪ್ರತಿನಿಧಿಗಳೇ ವೇದಿಕೆಯಲ್ಲಿ ಗೈರಾಗಿದ್ದರು. ಆದರೆ ವೇದಿಕೆಯಲ್ಲಿದ್ದ ಮಹಿಳೆಯ ಮೇಲೆ ಎಲ್ಲರ ಗಮನ ಹರಿದಿತ್ತು. ಅವರ ಹೆಸರು ಡಾ.ಸುಮಾಕೃಪಾ ಶಂಕರ್, ಬೆಂಗಳೂರಿನಲ್ಲಿ ಚರ್ಮರೋಗ ತಜ್ಞೆ ಆಗಿದ್ದಾರಂತೆ. ಅದರೆ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರೇನೂ ಇರಲಿಲ್ಲ. ಅಷ್ಟಕ್ಕೂ ಅವರಾರೆಂದು ಅಲ್ಲಿದ್ದವರಿಗೇ ತಿಳಿದಿರಲಿಲ್ಲ. ಸುಧಾ ಮೂರ್ತಿಯವರ ಜೊತೆ ಬಂದವರಿರಬೇಕೆಂದು ಸುಮ್ಮನಿದ್ದರು ಎನ್ನಲಾಗಿದೆ. ಆದರೂ ಪ್ರಶ್ನೆಯೊಂದು ಕೊರೆಯುತ್ತಲೇ ಇತ್ತು. ಸುಧಾಮೂರ್ತಿಯವರ ಪತಿ ನಾರಾಯಣಮೂರ್ತಿಯವರೇ ವೇದಿಕೆಯಿರಲಿಲ್ಲ. ಹಾಗಿರುವಾಗ ಇವರು ಅವರ ಜೊತೆ ಬಂದವರಲ್ಲ ಎಂಬುದು ಸ್ಪಷ್ಟವಾಗಿ ವಿಚಾರಿಸಲಾಗಿ ಅವರು ಚರ್ಮರೋಗ ವೈದ್ಯೆ ಎಂದು ತಿಳಿದು ಬಂದಿದೆ. ಇದರಲ್ಲಿ ಕಾರ್ಯಕ್ರಮ ಸಂಘಟಕರ ವೈಫಲ್ಯವನ್ನು ಎತ್ತಿ ತೋರಿಸಿದ್ದು, ಎಷ್ಟು ಕಾಳಜಿಯಿಂದ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಅಧಿಕಾರಿಗಳ ಬೇಜವ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: