ಪ್ರಮುಖ ಸುದ್ದಿಮೈಸೂರು

ದಸರಾ ಚಲನಚಿತ್ರೋತ್ಸವಕ್ಕೆ ಕಲಾಮಂದಿರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ

ಮೈಸೂರು,ಅ.10:- ಮೈಸೂರು ದಸರಾ ಮಹೋತ್ಸವ ಅಂಗವಾಗಿ ದಸರಾ ಚಲನಚಿತ್ರೋತ್ಸವಕ್ಕೆ ಕಲಾಮಂದಿರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಕಾರ್ಯಕ್ರಮದ ಉದ್ಘಾಟನೆ ನಂತರ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಪ್ರದರ್ಶನಗೊಂಡಿತು.  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಉಪಸ್ಥಿತರಿದ್ದರು. ನಟ ವಿಜಯ ರಾಘವೇಂದ್ರ, ನಟಿಯರಾದ ಹರ್ಷಿಕಾ ಪೂಣಚ್ಚ, ಪಾರೂಲ್ ಯಾದವ್, ನಿರ್ದೇಶಕ ಸತ್ಯಪ್ರಕಾಶ, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಾರಾ ಮೆರಗು ನೀಡಿದರು.

ವೇದಿಕೆ ಕಾರ್ಯಕ್ರಮದ ನಂತರ ಕಿರುಚಿತ್ರ ಇತಿಹಾಸ, ಕಿರುಚಿತ್ರ ಸ್ವರೂಪ ಮತ್ತು ಸಂವಿಧಾನ, ಪ್ರಸ್ತುತ ಕಿರುಚಿತ್ರಗಳ‌ ಮಹತ್ವ ಮತ್ತು ಮಾರುಕಟ್ಟೆ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು.

ಈ ವೇಳೆ ನಾಗತಿಹಳ್ಳಿ, ಚಿನ್ನೇಗೌಡ, ವಿಜಯರಾಘವೇಂದ್ರ, ರಿಷಭ್, ಹರ್ಷಿಕಾ, ಪಾರೂಲ್ ಯಾದವ್, ಸತ್ಯಪ್ರಕಾಶ್,  ತಿಥಿ ಸಿನಿಮಾ ಖ್ಯಾತಿಯ‌ ಸೆಂಚುರಿ ಗೌಡ, ಗಡ್ಡಪ್ಪ,  ಅವರನ್ನು ಸನ್ಮಾನಿಸಲಾಯಿತು. ಶ್ರೀರಂಗಪಟ್ಟಣದ ಶ್ರೀ ದೇವಿ ಚಿತ್ರಮಂದಿರದ ಮಾಲೀಕರಾದ ಲಕ್ಮೀದೇವಮ್ಮ, ವಿತರಕರಾದ ರಾಜೇಂದ್ರ, ನಿರ್ಮಾಪಕ ಎಸ್.ಎ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಐವರು ಟಾಂಗಾ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.

ದಸರಾ ಚಲನಚಿತ್ರೋತ್ಸವ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ದಸರಾ ಕಿರುಚಿತ್ರವನ್ನು ಅನಾವರಣಗೊಳಿಸಲಾಯಿತು. ಸಚಿವರಾದ ಜಯಮಾಲಾ, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎನ್.ಮಹೇಶ್, ಶಾಸಕರಾದ ಎಲ್.ನಾಗೇಂದ್ರ, ನಿರಂಜನ್ ಕುಮಾರ್, ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಅಧ್ಯಕ್ಷೆ ನಯಿಮಾ‌ ಸುಲ್ತಾನ್ ನಜೀರ್ ಅಹಮದ್, ಕೆ.ಟಿ.ಶ್ರೀಕಂಠೇಗೌಡ, ಅಶ್ವಿನ್ ಕುಮಾರ್, ತಾಪಂ‌ ಅಧ್ಯಕ್ಷೆ ಕಾಳಮ್ಮ ಕೆಂಪರಾಮಮ್ಮ ಉಪಸ್ಥಿತರಿದ್ದರು. ನಂತರ ಕಲಾಮಂದಿರದ ಆವರಣದಲ್ಲಿ ಸಿಎಂ ಒಂದು ಸುತ್ತು ಸುತ್ತಿ ಬಂದರು.

ನೀಲ ಮೇಘ ಶ್ಯಾಮ, ಕಾಣದ ಕಡಲಿಗೆ ಸೇರಿದಂತೆ ದಶಕದ ಹಿಂದಿನ ಹಳೆಯ ಗೀತೆಗಳು ಮೂಡಿಬಂದಿದ್ದು, ಯುವಸಮೂಹ ಹರ್ಷೋದ್ಘಾರ, ಚಪ್ಪಾಳೆ ಹಾಕಿದರು. (ಎಂ.ಎನ್,ಎಸ್.ಎಚ್)

Leave a Reply

comments

Related Articles

error: