ಮೈಸೂರು

ನೃತ್ಯಗ್ರಾಮ ಸೇವಾರ್ಥ ‘ಕಥಕ್ ನೃತ್ಯ ಪ್ರದರ್ಶನ ಡಿ.31ರಂದು

ಬೆಂಗಳೂರಿನ ನೂಪುರ್ ಪರ್ಫಾರ್ಮಿಂಗ್ ಆರ್ಟ್ ಸೆಂಟರ್‍ನ ‘ನೃತ್ಯಗ್ರಾಮ’ದ ಸೇವಾರ್ಥ ಕಥಕ್ ಶೈಲಿಯ ‘ಸಂಭ್ರಮ’ ನೃತ್ಯ ರೂಪಕವನ್ನು ಮೈಸೂರಿನಲ್ಲಿ ಏರ್ಪಡಿಸಲಾಗಿದೆ ಎಂದು ಕಲಾವಿದ ಹಾಗೂ ಸಂಸ್ಥೆಯ ನಿರ್ದೇಶಕ ಹರಿ ತಿಳಿಸಿದರು.

ಅವರು ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಭಾರತದ ಲಕ್ನೋ–ಜೈಪುರದ ಸಾಂಪ್ರದಾಯಿಕ ನೃತ್ಯ ರೂಪಕವಾದ ಕಥಕ್ ಅನ್ನು ಡಿ.31ರ ಮಧ್ಯಾಹ್ನ 2 ಗಂಟೆಗೆ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ‘ಓಂಕಾರ’ ಥೀಮ್‍ನೊಂದಿಗೆ ನೂಪುರ್ ಪರ್ಫಾರ್ಮಿಂಗ್ ಆರ್ಟ್ ಸೆಂಟರ್‍ ನಿರ್ದೇಶಕರು ಹಾಗೂ ಬಿರ್ಜೂ ಮಹಾರಾಜ್ ಶಿಷ್ಯರಾದ ಹರಿ ಮತ್ತು ಚೇತನ ದಂಪತಿಯೊಂದಿಗೆ ಸುಮಾರು 20 ಜನರಿರುವ ತಂಡದಿಂದ ನೃತ್ಯ ಹಾಗೂ ಜುಗಲ್’ಬಂದಿಯನ್ನು ಏರ್ಪಡಿಸಲಾಗಿದ್ದು ಉಚಿತ ಪ್ರವೇಶವಿದೆ ಎಂದರು.

ಸನ್ಮಾನ: ಮೈಸೂರು ಮತ್ತು ತಂಜೋರಿ ಕಲಾವಿದೆ ವಸಂತ ಕುಮಾರಿ, ವಿದುಷಿ ಡಾ.ಸರ್ವಮಂಗಳ ಶಂಕರ್, ಚೇತನಾ ರಾಧಾಕೃಷ್ಣ, ವಿದುಷಿ ವಸುಂಧರ ದೊರೆಸ್ವಾಮಿ, ಡಾ.ರಾಘವೇಂದ್ರ, ಶಾಸಕ ಹೆಚ್.ವಾಸು, ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸಮಾರಂಭಕ್ಕೆ ಚಿತ್ರನಟಿಯರಾದ ಪ್ರೇಮ, ಭಾವನಾ ಹಾಗೂ ನಿರ್ದೇಶಕ ಸುನೀಲ್ ಕುಮಾರ ದೇಸಾಯಿ ಆಗಮಿಸುವರು ಎಂದರು.

ಉಡುಪಿ ಮಠದ ವಿಶ್ವಾಧಿರಾಜ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.

ಮೈಸೂರು-ಬೆಂಗಳೂರು ಮಧ್ಯದ ರಾಮೋಹಳ್ಳಿಯಲ್ಲಿ ‘ನೃತ್ಯಗ್ರಾಮ’ ವಸತಿ ನೃತ್ಯ ಶಾಲೆ ನಿರ್ಮಿಸಲಿದ್ದು  ಆರ್ಥಿಕ ದುರ್ಬಲರಿಗೆ ಉಚಿತವಾಗಿ ಕಥಕ್ ನೃತ್ಯವನ್ನು ಬೋಧಿಸುವ ಉದ್ದೇಶವನ್ನು ಈ ಸಂಸ್ಥೆಯು ಹೊಂದಿದೆ. ವಿದೇಶಗಳಲ್ಲಿ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನೀಡಿಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದೆ ಹಾಗೂ ಸಂಸ್ಥೆಯ ನಿರ್ದೇಶಕಿ ಚೇತನಾ ಮತ್ತು ರೇಖಾ ಜಗದೀಶ್ ಉಪಸ್ಥಿತರಿದ್ದರು.

kathak

Leave a Reply

comments

Related Articles

error: