ಸುದ್ದಿ ಸಂಕ್ಷಿಪ್ತ

ಎಂ.ಎ, ಎಂ.ಎಸ್ಸಿ ಕೋರ್ಸ್‍ಗಳಿಗೆ ಪ್ರವೇಶ ಆರಂಭ : ಅರ್ಜಿ ಆಹ್ವಾನ

ಮಂಡ್ಯ (ಅ.10): ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ 2018-19ನೇ ಸಾಲಿನ ಪ್ರಥಮ ಎಂ.ಎ ಮತ್ತು ಎಂ.ಎಸ್ಸಿ ಕೋರ್ಸ್‍ಗಳಿಗೆ ಪ್ರವೇಶ ಆರಂಭವಾಗಿದೆ. ಮಂಡ್ಯ ಪ್ರಾದೇಶಿಕ ಕೇಂದ್ರದಲ್ಲಿ ಕೋರ್ಸ್‍ಗಳಿಗೆ ಪ್ರವೇಶಾತಿ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ವಿಶ್ವ ವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ನಿಗದಿತ ನಮೂನೆಯನ್ನು ವಿಶ್ವ ವಿದ್ಯಾನಿಲಯದ ಅಧಿಕೃತ ಜಾಲತಾಣ  www.ksoumysore.karnataka.gov.in ಅನ್ನು ಸಂಪರ್ಕಿಸಿ ಅರ್ಜಿ ಪಡೆಯಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನ.
ಬಿ.ಎ/ಬಿ.ಕಾಂ, ಬಿ.ಎಲ್.ಐ.ಸಿ, ಎಂ.ಎ/ಎಂ.ಕಾಂ, ಎಂ.ಎಲ್.ಐ.ಸಿ, ಎಂ.ಎಸ್ಸಿ ಪರಿಸರ ವಿಜ್ಞಾನ ಕೋರ್ಸ್‍ಗಳಿಗೆ ದಂಡಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಮಂಡ್ಯ ಪ್ರಾದೇಶಿಕ ಕೇಂದ್ರ, ನಂ:11 ಎ.ಇ ಬ್ಲಾಕ್ ವಿವೇಕಾನಂದ ನಗರ ಬಡಾವಣೆ, ಮಂಡ್ಯ ದೂರವಾಣಿ ಸಂಖ್ಯೆ:9964495936, 9916894579 ಅನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: