ಮೈಸೂರು

ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ, ಒಕ್ಕಲಿಗರ ಸಂಘದ ವಾರ್ಷಿಕೋತ್ಸವ ಡಿ.29ರಂದು

ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಹಾಗೂ ಜೆ.ಕೆ.ಟೈರ್ಸ್ ವಿಕ್ರಾಂತ್ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವವನ್ನು ಡಿ.29ರ ಗುರುವಾರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಚೆಲುವೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವರು ಬುಧವಾರ ಪತ್ರಕರ್ತರ ಭವನದಲ್ಲಿ ಮಾತನಾಡಿ, ಅಂದು ಸಂಜೆ 4.30ಕ್ಕೆ ಮೆಟಗಳ್ಳಿಯ ಶ್ರೀಲಕ್ಷ್ಮಮ್ಮ ಅಣ್ಣಯ್ಯಪ್ಪ ಕನ್ವೆನ್ಷನ್ ಹಾಲ್‍ನಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಸದ ಸಿ.ಎಸ್. ಪುಟ್ಟರಾಜು ಉದ್ಘಾಟಿಸುವರು. ಮೈಸೂರು ವಿ.ವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಕೆ.ಎಸ್.ಸದಾನಂದ ಹಾಗೂ ಮಹರಾಜ ಕಾಲೇಜಿನ ಡಾ.ಪಿ.ಕೆ.ರಾಜಶೇಖರ್ ಉಪಸ್ಥಿತರಿರುವರು. ಆದಿಚುಂಚನಗಿರಿ ಶಾಖಾಮಠದ ಶ್ರೀಸೋಮನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು.

ಮುಖ್ಯ ಅತಿಥಿಗಳಾಗಿ ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಕೆ.ಎಸ್.ಪುಟ್ಟಣ್ಣಯ್ಯ, ಮಾಜಿ ಮೂಡಾ ಅಧ್ಯಕ್ಷ ಎಲ್.ನಾಗೇಂದ್ರ ಹಾಗೂ ಇತತರು ಉಪಸ್ಥಿತರಿರುವರು. ಸಂಜೆ 4ಕ್ಕೆ ಮಿಮಿಕ್ರಿ ಕಲಾವಿದ ಗೋಪಿಯಿಂದ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ಅಂದು ಬೆಳಗ್ಗೆ 10ಕ್ಕೆ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು, ಮಹಾ ಪೌರ ಎಂ.ಜೆ. ರವಿಕುಮಾರ್ ಉದ್ಘಾಟಿಸುವರು. ಜಿ.ರಾಜಗೋಪಾಲಯ್ಯ ಅಧ್ಯಕ್ಷತೆ ವಹಿಸುವರು. ಜನಾಂಗದ ನಿವೃತ್ತ ಕಾರ್ಮಿಕರಿಗೆ ಸನ್ಮಾನ, 2017ರ ಕ್ಯಾಲೆಂಡರ್ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ‍್ಯಕ್ಷರಾದ ಕೆ.ಶಿವಪ್ಪ, ಎಸ್.ನಾಗೇಶ್, ಎಸ್.ಪಿ. ನಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಲೋಕೇಶ್, ಉಪಾಧ್ಯಕ್ಷ ಪುಟ್ಟಚನ್ನೇಗೌಡ, ಸಹಕಾರ್ಯದರ್ಶಿ ವಿ.ಶ್ರೀನಿವಾಸ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: