
ಪ್ರಮುಖ ಸುದ್ದಿ
ಖ್ಯಾತ ಗಾಯಕ ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳದ ಆರೋಪ
ರಾಜ್ಯ(ಬೆಂಗಳೂರು)ಅ.11:- ಕನ್ನಡದ ಖ್ಯಾತ ಗಾಯಕ ಜಸ್ಟ್ ಮಾತ್ ಮಾತಲ್ಲಿ ಎಂದು ಹಾಡಿ ಪಡ್ಡೆ ಹುಡುಗರ ಹೃದಯದಲ್ಲಿ ನೆಲೆಸಿದ್ದ ರಘು ದೀಕ್ಷಿತ್ ಅವರ ಮೇಲೆಯೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.
ಬಾಲಿವುಡ್ ನಟಿ ತನುಶ್ರೀ ದತ್ತಾ ನಟ ನಾನಾಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ದೇಶಾದ್ಯಂತ ಮೀ ಟೂ ಅಭಿಯಾನ ಚುರುಕುಗೊಂಡಿದ್ದು, ಎಷ್ಟೋ ಹಳೆಯ ಪ್ರಕರಣಗಳು ಜೀವ ಪಡೆದುಕೊಳ್ಳುತ್ತಿವೆ. ಗಾಯಕಿ ಚಿನ್ಮಯಿ ಶ್ರೀಪಾದ್ ತನ್ನ ಸಹಗಾಯಕರಾದ ರಘು ದೀಕ್ಷಿತ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಗಾಯಕ ರಘು ದೀಕ್ಷಿತ್ ಅವರು ತೋರಿದ ಸಲುಗೆಯಿಂದ ಅವರನ್ನು ತಬ್ಬಿ ಮುತ್ತು ಕೊಡಲು ಯತ್ನಿಸಿದ್ದು ನಿಜ. ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿದೆ. ಅವರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ ಎನ್ನಲಾಗಿದೆ.
(ಕೆ.ಎಸ್,ಎಸ್.ಎಚ್)