ಕರ್ನಾಟಕ

ಹೆಚ್ಚುವರಿ ಮತಗಟ್ಟೆಗಳ ಪಟ್ಟಿ ಪ್ರಕಟ: ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರ

ಹಾಸನ (ಅ.11): ಮುಂಬರುವ ಲೋಕ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆಗಳು ಹಾಗೂ ಹೆಚ್ಚುವರಿ ಮತಗಟ್ಟೆಗಳ ಪರಿಷ್ಕೃತ ಪಟ್ಟಿ ಪ್ರಕಟವಾಗಿದ್ದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಇಂದು ಅವುಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪರಿಶೀಲನೆಗಾಗಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಈಗಾಗಲೆ ಸಮೀಕ್ಷೆ ನಡೆಸಿ ಮತದಾರರ ಅನುಕೂಲಕ್ಕೆ ಪರಿಗಣಿಸಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈಗ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಲ್ಲಿಸುವ ಮನವಿಯನ್ನು ಚುನಾವಣೆ ಅಯೋಗದ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಅ.10ರಿಂದ ನ.20ರವರೆಗೆ ಮತದಾರರ ಪಟ್ಟಿ ಪರಿಷ್ಕರಿಸಿ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ಈ ಅವಧಿಯಲ್ಲಿ ಮತದಾರರು ಹೆಸರು, ಸೇರ್ಪಡೆ, ತಿದ್ದುಪಡಿ ತೆಗೆದು ಹಾಕುವುದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.

2019ನೇ ಜನವರಿ 3ನೇ ತಾರೀಕಿನಂದು ಡಾಟಾಬೇಸ್ ಜೋಡಣೆ ಮಾಡಿ ಪೂರಕ ಪಟ್ಟಿ ತಯಾರಿಸಿ ಮುದ್ರಣ ಮಾಡಲಾಗುವುದು, ಜನವರಿ 4 ರಂದು ಭಾವಚಿತ್ರವಿರುವ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ವೈಶಾಲಿ ಹಾಗೂ ಕಾಂಗ್ರೇಸ್, ಬಿ.ಜೆ.ಪಿ., ಜೆ.ಡಿ.ಎಸ್. ಪಕ್ಷದ ಪ್ರತಿನಿಧಿಗಳು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: