ಮೈಸೂರು

ಕಾಂಗ್ರೆಸ್ ಪಕ್ಷದವರಿಗೆ ಸಂಸ್ಕೃತಿ ಇಲ್ಲ : ಶಾಸಕ ಎಲ್.ನಾಗೇಂದ್ರ ವಾಗ್ದಾಳಿ

ಮೈಸೂರು,ಅ.11:- ಕಾಂಗ್ರೆಸ್ ಶಾಸಕರ‌ ನಡೆ ಸರಿಯಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಸಂಸ್ಕೃತಿ ಇಲ್ಲ ಎಂದು ಶಾಸಕ ಎಲ್.ನಾಗೇಂದ್ರ ಹರಿಹಾಯ್ದಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ‌ ಸಮಿಶ್ರ ಸರ್ಕಾರ ಇದ್ದರೂ ಸರ್ಕಾರಿ ಕಾರ್ಯಕ್ರಮಗಳಿಗೆ ಗೈರಾಗುವುದು ಎಷ್ಟು ಸರಿ? ದಸರಾ ಹಬ್ಬ ಅಂದರೆ ಯಾರ ಮೇಲೂ ದ್ವೇಷ ಮಾಡುವುದು ಅಲ್ಲ. ನಾವು ಈಗ ವಿರೋಧ ಪಕ್ಷದಲ್ಲಿ ಇದ್ದೇವೆ. ಆದರೂ ದಸರಾ ನಮ್ಮ ಹಬ್ಬ.ಕಾಂಗ್ರೆಸ್ ಪಕ್ಷದವರಿಗೆ ಏನು ಸಮಸ್ಯೆ ಇದೆ.ಮಾಧ್ಯಮದ ಮುಂದೆ ಬಂದು ಬಹಿರಂಗ ಚರ್ಚೆ ಮಾಡಲಿ. ನಾಡಹಬ್ಬದಲ್ಲಿ ಈ ರೀತಿಯ ರಾಜಕೀಯ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: