ಕ್ರೀಡೆಮೈಸೂರು

ಅಂತಾರಾಷ್ಟ್ರೀಯ ಕರಾಟೆ ಸೆಮಿನಾರ್‍ನಲ್ಲಿ ಮೈಸೂರು ದಂಪತಿ

ಇತ್ತಿಚೆಗೆ ಜಪಾನಿನ ಓಕಿನಾವದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಮತ್ತು ಕೊಬುಡೊ ವಿಶ್ವಮಟ್ಟದ ಸೆಮಿನಾರ್ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮೈಸೂರಿನ ದಂಪತಿಗಳಾದ ಶಿಹಾನ್ ಕೆ.ಪಿ. ಜಾನ್ಸನ್ ಮತ್ತು ಅವರ ಪತ್ನಿ ಸೆಂಪಾಯ್ ಲಿಜಿ ಜಾನ್ಸನ್ ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಸೆಮಿನಾರ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದಂಪತಿಗಳಿಗೆ ಓಕಿನಾವದ ಉಪರಾಜ್ಯಪಾಲರು ಸನ್ಮಾನ ಮಾಡಿದರು. ರಾಜ್ಯಪಾಲ ಟಕೇಶಿ ಒನಗ ಅವರು ಪ್ರಮಾಣಪತ್ರ ನೀಡಿ ಗೌರವಿಸಿದರು. ಮಹಿಳಾ ಕರಾಟೆ ತರಬೇತುದಾರರಾಗಿ ಸೆಮಿನಾರ್ ಮತ್ತು ತರಬೇತಿ ಅಧಿವೇಶನದಲ್ಲಿ ಭಾಗವಹಿಸಿ ಓಕಿನಾವದ ರಾಜ್ಯಪಾಲರಿಂದ ಪ್ರಶಸ್ತಿ ಮತ್ತು ಪ್ರಮಾಣಪತ್ರ ಪಡೆದ ಭಾರತದ ಮೊದಲ ಮಹಿಳೆ ಸೆಂಪಾಯ್ ಲಿಜಿ.

ಈ ದಂಪತಿಗಳು ಮೈಸೂರಿನ ಬೋಗಾದಿಯ ರೂಪನಗರದಲ್ಲಿ ವಾಸವಿದ್ದು, ವಿವಿಧ ಶಾಲೆಗಳಲ್ಲಿ ಕರಾಟೆ ಕಲಿಸಿಕೊಡುತ್ತಿದ್ದಾರೆ.

Leave a Reply

comments

Related Articles

error: