ಮೈಸೂರು

ಪೌರಕಾರ್ಮಿಕರಿಗೆ ನೀಡುವ ಬೆಳಗಿನ ಉಪಹಾರ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು,ಅ.12:- ಪೌರ ಕಾರ್ಮಿಕರಿಗೆ ಇಂದಿನಿಂದ ಬೆಳಗಿನ  ಉಪಹಾರ ನೀಡಲಾಗುತ್ತಿದ್ದು, ಉಪಹಾರ ನೀಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಇಂದು ಬೆಳಿಗ್ಗೆ ಪುರಭವನದ ಮುಂಭಾಗ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಕಾರ್ಯಕ್ರಮಕ್ಕೆಪಾಲಿಕೆಯ ಆಯುಕ್ತ  ಕೆ.ಹೆಚ್.ಜಗದೀಶ್ ಚಾಲನೆ ನೀಡಿದರು. ಕಳೆದ ವಾರವಷ್ಟೇ  ವಿವಿಧ ಬೇಡಿಕೆ ಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡಿಸಿದ್ದ ಪೌರ ಕಾರ್ಮಿಕರಿಗೆ ಪಾಲಿಕೆಯು ಇಂದಿನಿಂದ ಬೆಳಗಿನ ಉಪಹಾರ ನೀಡುತ್ತಿದೆ.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: