ಪ್ರಮುಖ ಸುದ್ದಿಮೈಸೂರು

ಪೋಟೋ ಹಾಕಿಲ್ಲವೆಂದು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದು ಎಷ್ಟು ಸರಿ ಸಚಿವ ಪುಟ್ಟರಂಗಶೆಟ್ಟಿಯವರಿಗೆ ಸಚಿವ ಜಿಟಿ ದೇವೇಗೌಡ ಪ್ರಶ್ನೆ

ಮೈಸೂರು,ಅ.12:- ಸಚಿವ ಪುಟ್ಟರಂಗಶೆಟ್ಟಿಗೆ ಪೋಟೋ  ಹಾಕಿಲ್ಲ ಎಂದು ಬೇಸರವಷ್ಟೇ. ಪೋಟೋ ಹಾಕಿಲ್ಲವೆಂದು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದು ಎಷ್ಟು ಸರಿ ಎಂದು ಸಚಿವ ಜಿ.ಟಿ.ದೇವೇಗೌಡ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳು ಸಚಿವ ಪುಟ್ಟರಂಗಶೆಟ್ಟಿಯವರ ಹೇಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸಾರಾ ಮಹೇಶ್ ಪೋಟೋ ಏಕೆ ಹಾಕಿದ್ದೀರಿ ಎನ್ನುವ ಪ್ರಶ್ನೆಯನ್ನು ಅವರು ಮಾಡುತ್ತಿದ್ದಾರೆ. ಅವರು ದಸರಾ ಕಾರ್ಯಕ್ರಮದಲ್ಲಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಅದಕ್ಕೆ ಅವರ ಪೋಟೋ ಹಾಕಿದ್ದೇವೆ. ಅದನ್ನೇ ಅವರು ತಪ್ಪಾಗಿ ಅರ್ಥೈಸಿಕೊಂಡರೆ ನಾವೇನು ಮಾಡುವುದಕ್ಕೆ ಆಗುತ್ತದೆ. ದಸರಾ ಉಪಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡಿಲ್ಲ ಎಂದು ಅವರ ದೂರು, ಮಾಡುವುದಕ್ಕೆ ಚುನಾವಣಾ ನೀತಿ ಸಂಹಿತೆ ಜಾರಿ ಬಂತಲ್ಲ, ಬಂದರು ಮಾಡುವುದಕ್ಕೆ ಆಗತ್ತಾ? ಶಾಸಕರಿಗೆ,ಸಂಸದರಿಗೆ, ಸಚಿವರಿಗೆ ಎಷ್ಟೆಷ್ಟು ಪಾಸ್ ವಿತರಣೆ ಆಗಬೇಕು ಅಷ್ಟು ಆಗುತ್ತದೆ. ಪಾಸ್ ವಿಚಾರಕ್ಕೆ ಮತ್ತು ಪೋಟೋ ವಿಚಾರಕ್ಕೆ ನೀವು ಮುನಿಸಿಕೊಂಡರೆ, ನಾವೇನು ಮಾಡುವುದಕ್ಕೆ ಆಗಲ್ಲ ಎಂದರು.

ಹೀಗಾಗಿ ದಸರಾದಲ್ಲಿ ರಾಜಕೀಯ ಮಾಡದೇ, ಎಲ್ಲರೂ ಬಂದು ದಸರಾ ಯಶಸ್ವಿಗೊಳಿಸಿ ಎಂದು ಕಾಂಗ್ರೆಸ್ ಶಾಸಕರಿಗೆ, ಸಚಿವರಿಗೆ ಹಾಗೂ ಸಂಸದರಿಗೆ ಮನವಿ ಮಾಡಿಕೊಂಡರು.ಈ ಹಿಂದೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕನಾಗಿದ್ದಾಗ ಕಾಂಗ್ರೆಸ್ ನಾಯಕರ ಜೊತೆ  ವೇದಿಕೆ ಹಂಚಿಕೊಂಡಿದಿನಲ್ವಾ?ನೀವು ಹಾಗೇ ನಮ್ಮ ಜೊತೆ ದಸರಾದಲ್ಲಿ ಪಾಲ್ಗೊಳ್ಳಿ ಎನ್ನುವ ಮೂಲಕ ಮತ್ತೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ಕೊಟ್ಟರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: