
ಕರ್ನಾಟಕ
ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಸೂಚನೆ
ಹಾಸನ (ಅ.12): ಜಿಲ್ಲೆಯಾದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ, ಕೆಲವು ಮನೆಗಳು ಮತ್ತು ಪೆಟ್ಟಿಗೆ ಅಂಗಡಿಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಗಲಭೆ-ಶಾಂತಿ ಕದಡುವ ಸಂದರ್ಭವಿರುತ್ತದೆ. ಆದ್ದರಿಂದ ಕೂಡಲೇ ಅಕ್ರಮ ಮಧ್ಯ ಮಾರಾಟ ತಡೆಗಟ್ಟಿ, ಹಳ್ಳಿಗಳಲ್ಲಿ ಶಾಂತಿಯುತ ವಾತವಾರಣ ಮೂಡಿಸಲು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಕೂಡಲೆ ಕಾರ್ಯ ಪ್ರವೃತ್ತರಾಗಿ ಸಂಪೂರ್ಣವಾಗಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಪೊಲೀಸ್ ಅಧೀಕ್ಷಕರಾದ ಡಾ.ಎ.ಎನ್. ಪ್ರಕಾಶ್ ಗೌಡ ಅವರು ತಿಳಿಸಿದ್ದಾರೆ.
ಅಕ್ರಮ ಮದ್ಯ ಮಾರಾಟದ ಬಗ್ಗೆ ಪ್ರತಿದಿನ ವೈಯುಕ್ತಿದ ದಾಳಿ ನಡೆಸಿ ವರದಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವುದು. ಅಕ್ರಮ ಮದ್ಯ ಮಾರಾಟ ಮತ್ತು ತಯಾರಿಕೆ ಬಗ್ಗೆ ಜಿಲ್ಲೆಯ ಎಲ್ಲಾ ಡಿವೈ.ಎಸ್.ಪಿ. ಮತ್ತು ಸಿ.ಪಿ.ಐ ಆಗಿಂದಾಗ್ಗೆ ಪಿ.ಎಸ್.ಐ ರವರಿಗೆ ವೈಯುಕ್ತಿಕ ದಾಳಿ ನಡೆಸಲು ಮಾರ್ಗದರ್ಶ ನೀಡುವುದು. ಪತ್ರಿದಿನ ಬೆಳಗ್ಗೆ 9 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ ದಾಖಲಾದ ಎಲ್ಲಾ ಪ್ರಕರಣಗಳ ಬಗ್ಗೆ ವಿಶೇಷವಾದ ವರದಿಯನ್ನು ನೀಡುವಂತೆ ಸೂಚಿಸಿದ್ದಾರೆ.
ಅಕ್ರಮ ಮದ್ಯ ಮಾರಾಡದ ಬಗ್ಗೆ ವಿಶೇಷವಾದ ತಂಡ ರಚನೆ ಮಾಡಿ ಸಾರ್ವಜನಿಕರಿಂದ ಮಾಹಿತಿಯಿಂದ ಪಡೆಯುವಂತೆ ಸೂಚಿಸಿದೆ. ಸಾರ್ವಜನಿಕರು ಅಕ್ರಮ ಮದ್ಯ ಮಾರಾಟದ ಬಗ್ಗೆ 08172-268845 ಗೆ ಮಾಹಿತಿಉನ್ನು ನೀಡಬಹುದು, ಮಾಹಿತಿ ನೀಡಿದ ಸಾರ್ವಜನಿಕರಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. (ಎನ್.ಬಿ)