ಮೈಸೂರು

ತಾಯಿ ನಿಧನದ ಹಿನ್ನೆಲೆ : ಮನನೊಂದಿದ್ದ ಯುವಕ ನೇಣಿಗೆ ಶರಣು

ಮೈಸೂರು,ಅ.12:- ತಾಯಿ ನಿಧನರಾದ ಹಿನ್ನೆಲೆಯಲ್ಲಿ ಮನನೊಂದಿದ್ದ ಯುವಕ ನೇಣಿಗೆ ಶರಣಾದ ಘಟನೆ ಮೇಟಗಳ್ಳಿಯಲ್ಲಿ ನಡೆದಿದೆ.

ಮೃತರನ್ನು ಮೇಟಗಳ್ಳಿಯ ಮಾರಿಗುಡಿ ಬೀದಿ ನಿವಾಸಿ ವಿನಾಯಕ(28)ಎಂದು ಗುರುತಿಸಲಾಗಿದ್ದು, ಇವರು ತಂದೆ ಮೃತಪಟ್ಟ ಬಳಿಕ ತಾಯಿಯ ಜೊತೆ ವಾಸವಾಗಿದ್ದರು. ಕ್ಲಬ್ ಒಂದರಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಪಾರ್ಶ್ವವಾಯುವಿನಿಂದ ಪೀಡಿತರಾಗಿದ್ದ ತಾಯಿ ಕಳೆದ ಇಪ್ಪತ್ತು ದಿನಗಳ ಹಿಂದೆ ಮೃತಪಟ್ಟಿದ್ದರು. ಇದರಿಂದ ಒಂಟಿಯಾಗಿದ್ದ ವಿನಾಯಕ ಖಿನ್ನತೆಗೆ ಒಳಗಾಗಿ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಇವರ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದವರು ಕಿಟಕಿ ತೆರೆದು ನೋಡಲಾಗಿ ನೇಣು ಹಾಕಿಕೊಂಡು ಮೃತಪಟ್ಟಿರುವುದು ಕಂಡು ಬಂದಿದೆ. ಮಾಹಿತಿ ಪಡೆದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: