ಸುದ್ದಿ ಸಂಕ್ಷಿಪ್ತ

ದಿ.14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಧಮ್ಮದೀಕ್ಷಾ ದಿನಾಚರಣೆ : ಉಪನ್ಯಾಸ

ಮೈಸೂರು,ಅ.12 : ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 62ನೇ ವರ್ಷದ ಧಮ್ಮದೀಕ್ಷಾ ದಿನಾಚರಣೆ ಅಂಗವಾಗಿ ‘ಅಂಬೇಡ್ಕರ್ ಗ್ರಹಿಸಿದ ಬೌದ್ಧ ಚಿಂತನೆಗಳು : ಮಹತ್ವ ಹಾಗೂ ಪ್ರಸ್ತುತತೆ’ ವಿಷಯವಾಗಿ ಉಪನ್ಯಾಸವನ್ನು ಅ.14ರ ಬೆಳಗ್ಗೆ 11 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರ ಮಾನಸಗಂಗೋತ್ರಿಯಲ್ಲಿ ಏರ್ಪಡಿಸಲಾಗಿದೆ.

ಕುಲಪತಿ ಪ್ರೊ.ಆಯಿಷಾ ಎಂ ಷರೀಫ ಅವರು ಉದ್ಘಾಟಿಸಲಿದ್ದಾರೆ. ದಲಿತ ಹಾಗೂ ಮಹಿಳಾಪರ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಉಪನ್ಯಾಸ ನೀಡುವರು. ಅಲೆಮಾರಿ ಸಮುದಾಯದ ಹೋರಾಟಗಾರ ಕುಪ್ಪೆ ನಾಗರಾಜ ಇರಲಿದ್ದು, ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಅರ್)

Leave a Reply

comments

Related Articles

error: