ಮೈಸೂರುಸಿಟಿ ವಿಶೇಷ

ಕಾಲು ಸ್ವಾಧೀನ ಕಳೆದುಕೊಂಡ ಶ್ವಾನಕ್ಕೆ ವೀಲ್ಚೇರ್ ಅಳವಡಿಕೆ: ಪ್ರಾಣಿಪ್ರೀತಿ ಮೆರೆದ ಮೈಸೂರಿನ ಕುಟುಂಬ

ಮೃತ ಶ್ವಾನದ ಕಣ್ಣು ಮತ್ತೊಂದು ಶ್ವಾನಕ್ಕೆ ಜೋಡಿಸಿದ ಶಸ್ತ್ರ ಚಿಕಿತ್ಸೆ ಬಗ್ಗೆ ಇತ್ತೀಚೆಗೆ ‘ಸಿಟಿಟುಡೆ’ಯಲ್ಲೇ ವರದಿಯಾಗಿತ್ತು.  ಅದೇ ರೀತಿ ಪ್ರಾಣಿಪ್ರೀತಿ ತೋರಿರುವ ಉದಾಹರಣೆಯನ್ನು ಈಗ ನಿಮ್ಮ ಮುಂದಿಡುತ್ತಿದ್ದೇವೆ. ರಸ್ತೆಯಲ್ಲಿ ಅಪಘಾತಕ್ಕೀಡಾದ ಬೀದಿ ನಾಯಿಯನ್ನು ಆರೈಕೆ ಮಾಡಿ ಕೃತಕ ಕಾಲು ಜೊಡಿಸಿ ಮರುಚೈತನ್ಯ ನೀಡಿದ್ದಾರೆ ಮದನ್ ಎಂಬುವವರು.

dohh

ಇದು ಮದನ್ ಅವರ ಎರಡನೇ ಪ್ರಯೋಗ:

‘ವೈದ್ಯೋ ನಾರಾಯಣೋ ಹರಿ’ ಎನ್ನುವ ಮಾತಿದೆ. ಈ ಮಾತಿಗೆ ಉದಾಹರಣೆ ಎನ್ನುವಂತೆ ಮದನ್ ಅವರು ತಮ್ಮ ವೃತ್ತಿಧರ್ಮ ಪಾಲಿಸಿದ್ದಾರೆ. ರಸ್ತೆ ಅಪಘಾತದಲ್ಲಿ ತನ್ನೆರಡೂ ಕಾಲುಗಳ ಸ್ವಾಧೀನವನ್ನೇ ಕಳೆದುಕೊಂಡ ಬೀದಿನಾಯಿಯ ಹಾರೈಕೆ ಮಾಡಿ ಮರುಜೀವ ನೀಡಿದ್ದಾರೆ. ಇದೇ ಮದನ್ ಅವರು ಇತ್ತಿಚೆಗಷ್ಟೇ ಮೃತ ಶ್ವಾನದ ಕಣ್ಣನ್ನು ಇನ್ನೊಂದು ನಾಯಿಗೆ ಅಳವಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಡಾ. ಮದನ್ ಅವರು ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.

ಕಾಲು ಕಳೆದುಕೊಂಡು ರೋದಿಸುತ್ತಿದ್ದ ನಾಯಿ:

ಕಳೆದ ಮೂರು ತಿಂಗಳ ಹಿಂದೆ ಮೈಸೂರು ನಗರದ ಬೆಮೆಲ್ ಬಡವಾಣೆಯ ಬೀದಿ ನಾಯಿಯೊಂದು ರಸ್ತೆ ಅಪಘಾತದಲ್ಲಿ ತನ್ನ ಹಿಂಬದಿ ಕಾಲಿನ ಸ್ವಾಧೀನ ಕಳೆದುಕೊಂಡು ರೋದಿಸುತ್ತಿರುವಾಗ ಕನಿಕರದಿಂದ ಜಂಬುಕೇಶ್ ಕುಟುಂಬ ಆ ನಾಯಿಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲೇ ಆರೈಕೆ ಮಾಡುತ್ತಿದ್ದರು. ತದನಂತರ ಅಪಘಾತವಾದ ನಾಯಿಯನ್ನು ಸ್ಥಳೀಯ ಪಶುವೈದ್ಯರಾದ ಡಾ.ಮದನ್ ಅವರ ಬಳಿ ತೋರಿಸಿದಾಗ ಅವರು ನಾಯಿಗೆ ಎರಡು ಚಕ್ರವಿರುವ ಸಾಧನ ಅಳವಡಿಸಿದ್ದಾರೆ. ಇದೀಗ ಈ ನಾಯಿಗೆ ನಡೆದಾಡುವುದು ಮೊದಲಿನಷ್ಟು ಕಷ್ಟವಲ್ಲ.

bbb

ಚಿಕಿತ್ಸೆ ಕೊಡಿಸುತ್ತಿರುವವರ ಮಾತು:

ಈ ಬಗ್ಗೆ ಮಾತನಾಡಿದ ಮನೆಯ ಮಾಲೀಕ ಜಂಬುಕೇಶ್, “ನಮ್ಮ ಮನಗೆ ಪ್ರತಿದಿನ ಈ ನಾಯಿ ಬರುತ್ತಿತ್ತು. ನಾವು ಪತ್ರಿದಿನ ಇದಕ್ಕೆ ಅನ್ನ, ಬಿಸ್ಕೆಟ್ ಹಾಕುತ್ತಿದ್ದೆವು. ಅಂಗಡಿಗೆ ಹೋಗುವಾಗಲೂ ನಮ್ಮ ಜೊತೆ ಬರುತ್ತಿತು. ರಾತ್ರಿ ಮನೆಯ ಮಹಡಿಯ ಮೇಲೆ ಬಂದು ಮಲಗುತಿತ್ತು. ನಮ್ಮ ತಂದೆ ತಾಯಿ ತರಕಾರಿ ತರಲು ಹೋದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯ ಸೊಂಟಕ್ಕೆ ಪೆಟ್ಟು ಬಿದ್ದಿದೆ. ಮೇಲೇಳಾರದ ಸ್ಥಿತಿಯಲ್ಲಿದ್ದ ನಾಯಿಯನ್ನ ಮನೆಗೆ ತಂದು ಮನೆಯಲ್ಲೆ ಹಾರೈಕೆ ಮಾಡುತ್ತಿದ್ದೇವೆ. ನಮ್ಮ ಕಾರಿನಲ್ಲೇ ವೈದ್ಯರ ಬಳಿಗೆ ತೋರಿಸುತ್ತಿದ್ದು, ಒಂದೆರಡು ತಿಂಗಳಲ್ಲಿ ಕಾಲು ಮೊದಲಿನ ಸ್ಥಿತಿಗೆ ಬರಲಿದ್ದು ಅಲ್ಲಿಯವರೆಗೆ ದ್ವಿಚಕ್ರದ ಗಾಡಿಯಲ್ಲಿ ವಾಕಿಂಗ್ ಮಾಡಿಸುತ್ತಿದ್ದೇನೆ” ಎನ್ನುತ್ತಾರೆ.

ಹೆತ್ತ ತಂದೆ-ತಾಯಿಗಳನ್ನೆ ಮನೆಯಿಂದ ಹೊರಹಾಕುವ ಇಂತಹ ಕಾಲದಲ್ಲಿ ಬೀದಿ ನಾಯಿಯೊಂದನ್ನ ಕಳೆದ ಮೂರು ತಿಂಗಳಿನಿಂದ ಮನೆಯ ಸದಸ್ಯ ಎನ್ನುವಂತೆ ನೋಡಿಕೊಳ್ಳುತ್ತಿರುವ ಇಂತಹ ಕುಟುಂಬ ನಿಜಕ್ಕೂ ಸಮಾಜಕ್ಕೆ ಮಾದರಿ.

-ಸುರೇಶ್ ಎನ್

dddd

 

Leave a Reply

comments

Related Articles

error: