ಸುದ್ದಿ ಸಂಕ್ಷಿಪ್ತ

ತರಬೇತಿ ಅರ್ಜಿ ಆಹ್ವಾನ

ಮೈಸೂರು. ಅ.12:- ಅಡ್ವಾಂಟೇಜ್ ಸೀನಿಯರ್ಸ್ ಸಂಸ್ಥೆಯ ವತಿಯಿಂದ ಗ್ರಾಮೀಣ ಬಡ ಹಾಗೂ ನೊಂದ ಮಹಿಳೆಯರಿಗೆ ಆರೋಗ್ಯ  ಕ್ಷೇತ್ರದಲ್ಲಿ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ.

4 ತಿಂಗಳ ತರಬೇತಿಯು ಉಚಿತವಾಗಿದ್ದು, ಉಚಿತ ಊಟ ಮತ್ತು ವಸತಿಯನ್ನು ತರಬೇತಿಯ ಅವಧಿಯಲ್ಲಿ ನೀಡಲಾಗುತ್ತೆ. ಕೊನೆಯ 2 ತಿಂಗಳ ತರಬೇತಿಯ ಅವಧಿಯಲ್ಲಿ ಮಾಸಿಕ ರೂ. 7000/- ರಂತೆ ಶಿಷ್ಯವೇತನ ನೀಡಲಾಗುತ್ತದೆ. ತರಬೇತಿ ಮುಗಿದ ಬಳಿಕ ಮಾಸಿಕ ರೂ. 15000/- ರಿಂದ 18000/- ವರೆಗಿನ ವೇತನದ ಉದ್ಯೋಗಾವಕಾಶವನ್ನು ಸಂಸ್ಥೆಯಿಂದ ಒದಗಿಸಲಾಗುತ್ತದೆ. 23-35ರ ವಯೋಮಾನದ ಗ್ರಾಮೀಣ ಬಡ ಹಾಗೂ ನೊಂದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2520910 ನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: