ಕರ್ನಾಟಕ

ಚಿತ್ರದುರ್ಗ ಮಠಕ್ಕೆ ಭೇಟಿ ನೀಡಿದ ನಟ ದರ್ಶನ್

ಚಿತ್ರದುರ್ಗ,ಅ.13- ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ ನೀಡುವ ಸಲುವಾಗಿ ದರ್ಶನ್ ಆಗಮಿಸಿದ್ದರು. ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್ ಜತೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ಸಾಹಿತಿ ಹಾಗೂ ಬರಹಗಾರ ಬಿ ಎಲ್ ವೇಣು ಮತ್ತು ಹಿರಿಯ ನಟ ಶ್ರೀನಿವಾಸ ಮೂರ್ತಿ ಜೊತೆಯಲ್ಲಿದ್ದರು.

ದರ್ಶನ್ ಮಠದ ಬಳಿ ಬರುತ್ತಿದ್ದಂತೆ ಮೊದಲು ಆನೆ ಗಜರಾಜ ಮತ್ತು ಮಾವುತರನ್ನ ಮಾತನಾಡಿಸಿ ಯೋಗಕ್ಷೇಮ ವಿಚಾರಿಸಿದರು. ಆನೆ ಇಂದು ಏನು ತಿಂಡಿ ತಿಂದಿದೆ ಎಂದು ಕೇಳಿದರು. ಆನೆಯನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಮಾವುತರಿಗೆ ಸೂಚಿಸಿದರು. ಇದು ಸಹಜವಾಗಿ ವಿಶೇಷವೆನಿಸಿತು. (ಎಂ.ಎನ್)

Leave a Reply

comments

Related Articles

error: