ದೇಶ

ಶಬರಿಮಲೆ ತೀರ್ಪು ಮೇಲ್ಮನವಿ ಸಲ್ಲಿಸಿದ ತಂತ್ರಿ ಕುಟುಂಬ

ನವದೆಹಲಿ,ಅ.13-ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ತಂತ್ರಿ ಕುಟುಂಬ ಇದೀಗ ಮೇಲ್ಮನವಿ ಸಲ್ಲಿಸಿದೆ.

ಸುಪ್ರೀಂಕೋರ್ಟ್ ನ್ಯಾಯಪೀಠವು ಇಲ್ಲಿನ ನಂಬಿಕೆ ಆಚರಣೆಗಳನ್ನು ಪರಿಗಣಿಸಿಲ್ಲ. ದೇವಾಲಯದ ಆಚಾರ-ವಿಚಾರಗಳ ಬಗ್ಗೆ ಅಂತಿಮ ನಿರ್ಣಯಗಳನ್ನು ಕೈಗೊಳ್ಳುವ ಹಕ್ಕು ತಂತ್ರಿ ಕುಟುಂಬದ್ದು. ವಿಗ್ರಹ ಆರಾಧನೆ ಹಿಂದೂ ಧರ್ಮದಲ್ಲಿ ಅಗತ್ಯ. ವಿಗ್ರಹ ಮೇಲೆ ನಮ್ಮ ಹಕ್ಕು ಇದೆ. ಸಂವಿಧಾನದ 25 (1) ಪರಿಚ್ಛೇದ ಪ್ರಕಾರ ವಿಗ್ರಹ ಮೇಲಿರುವ ಹಕ್ಕನ್ನು ಸುಪ್ರೀಂಕೋರ್ಟ್ ಪರಿಗಣಿಸಿಲ್ಲ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿ ಶಬರಿಮಲೆಯ ತಂತ್ರಿ ರಾಜೀವರು ಕಂದರಾರ್ ಮತ್ತು ಮೋಹನರು ಕಂದರಾರ್ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಎನ್‍ಎಸ್‍ಎಸ್ ಮತ್ತು ಪಂದಳಂ ರಾಜಮನೆತನ ಮೇಲ್ಮನವಿ ಸಲ್ಲಿಸಿತ್ತು. ಅದೇ ವೇಳೆ ಈ ತಿಂಗಳ 28ರ ನಂತರವೇ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸ್ವೀಕರಿಸಲಾಗುವುದು. ಆದಾಗ್ಯೂ ಶೀಘ್ರದಲ್ಲೇ ನಮ್ಮ ಅರ್ಜಿ ಸ್ವೀಕರಿಸಬೇಕೆಂಬ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. (ಎಂ.ಎನ್)

Leave a Reply

comments

Related Articles

error: