ಪ್ರಮುಖ ಸುದ್ದಿಮೈಸೂರು

ಓಪನ್ ಸ್ಟ್ರೀಟ್ ಫೆಸ್ಟಿವಲ್ ಗೆ ಚಾಲನೆ : ಸಚಿವರಿಗಾಗಿ ಕಾದು ಮರಳಿದ ಬಿಜೆಪಿ ಶಾಸಕರು ; ಹೊಟ್ಟೆಕಿಚ್ಚು ಅಂದ್ರು ಸಚಿವ ಸಾ.ರಾ.ಮಹೇಶ್

ಮೈಸೂರು,ಅ.13:- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಇಂದು ಸಾಂಸ್ಕೃತಿಕ ನಗರಿಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ನ್ನು ಕೋರ್ಟ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ತಡವಾಗಿಯಾದರೂ ಓಪನ್ ಸ್ಟ್ರೀಟ್ ಫೆಸ್ಟಿವಲ್ ಗೆ ಕೊನೆಗೂ ಚಾಲನೆ ದೊರಕಿದೆ.

ಕಳೆದ ವರ್ಷ ಅರಸು ರಸ್ತೆಯಲ್ಲಿ ನಡೆದಿದ್ದ ಓಪನ್ ಸ್ಟ್ರೀಟ್ ಮೇಳಕ್ಕೆ ಟ್ರಾಫಿಕ್ ಸಮಸ್ಯೆ ಆಗಿದ್ದ ಕಾರಣ ಅರಸು ರಸ್ತೆಯಿಂದ ಬುಲ್ ವಾರ್ಡ್ ರಸ್ತೆಯಲ್ಲಿ ಆಯೋಜನೆಗೊಂಡಿತ್ತು. ಏಕಲವ್ಯ ವೃತ್ತದಿಂದ ಕೋರ್ಟ್ ಸಮೀಪದ ವೃತ್ತದವರೆಗೆ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ವಿದೇಶದಲ್ಲಿ ನಡೆಯುವ ಮಾದರಿಯಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಡಿಜೆ ಡ್ಯಾನ್ಸ್ ಸೇರಿದಂತೆ ಇನ್ನಿತರ ಮನರಂಜನಾ ಕಾರ್ಯಕ್ರಮಗಳ ಧಮಾಕ, ವೈವಿಧ್ಯಮಯ ಕಾರ್ಯಕ್ರಮಗಳು ಜನತೆಯನ್ನು ಆಕರ್ಷಿಸಿದವು. ದಸರಾ ಪ್ರಯುಕ್ತ ಹಮ್ಮಿಕೊಳ್ಳುವ ಅನೇಕ ಕಾರ್ಯಕ್ರಮಗಳಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ಯುವಕರ ಫೇವರೆಟ್ ಕಾರ್ಯಕ್ರಮವಾಗಿದೆ.

ಓಪನ್‌ ಸ್ಟ್ರೀಟ್ ಫೆಸ್ಟಿವಲ್ಗೆ ಸಚಿವ ಸಾರಾ ಮಹೇಶ್ ಚಾಲನೆ ನೀಡಿದರು. ಓಪನ್‌ ಸ್ಟ್ರೀಟ್ ಫೆಸ್ಟಿವಲ್ ಉದ್ಘಾಟನೆಗೆಂದು ಬಂದು ಕಾದು ಕುಳಿತಿದ್ದ ಬಿಜೆಪಿ ನಾಯಕರು ಸಚಿವರು ಆಗಮಿಸದ ಕಾರಣ ವಾಪಸ್ ಆದ ಘಟನೆಯೂ ನಡೆದಿದೆ. ಶಾಸಕರುಗಳಾದ ಎಸ್.ಎ.ರಾಮ್ ದಾಸ್, ನಾಗೇಂದ್ರ ವಾಪಸ್ಸಾದರು. 10ಗಂಟೆಗೆ ಉದ್ಘಾಟನೆ ಆಗಬೇಕಿದ್ದ ಕಾರ್ಯಕ್ರಮ 11ಗಂಟೆಯಾದರೂ ಉದ್ಘಾಟನೆಯಾಗಲಿಲ್ಲ. ಒಂದು ಗಂಟೆಗೂ ಹೆಚ್ಚುಕಾಲ ಕಾದು ಕುಳಿತ ಶಾಸಕರು ಸಚಿವರು ಬರದ ಕಾರಣ ವಾಪಸ್ಸಾಗಿದ್ದಾರೆ ಎನ್ನಲಾಗಿದೆ. ಬಳಿಕ 11.30ಕ್ಕೆ ಆಗಮಿಸಿದ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದಸರಾ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರ ಅಸಮಧಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆಂದು ಅವರಿಗೆ ಹೊಟ್ಟೆ ಕಿಚ್ಚು.ನಿಜವಾದ ಹೊಟ್ಟೆ ನೋವು ಇರೋರಿಗೆ ಔಷಧಿ ಕೊಡಬಹುದು.ಇವರಿಗೆ ಸುಳ್ಳಿನ ಹೊಟ್ಟೆ ನೋವು ಹೀಗಾಗಿ ಔಷಧಿ ಕೊಡೋಕೆ ಆಗಲ್ಲ.ಈ ಕಿಚ್ಚಿನಿಂದ ಹೀಗೆ ಮಾಡ್ತಾ ಇದಾರೆ.‌ಶಾಸಕ ನಾಗೇಂದ್ರ ಅವರಿಗೆ ಪಾಸ್ ಸಿಕ್ಕಲ್ಲ ಅಂತಾ ನಿನ್ನೆ  ಅಸಮಾಧಾನಗೊಂಡಿದ್ದಾರೆ.ಎಲ್ಲಾ ಶಾಸಕರುಗಳಿಗೆ ಮುಂಚೆಯೇ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ನಾವು ಓಪನ್ ಸ್ಟ್ರೀಟ್  ಕಾರ್ಯಕ್ರಮ ನಿಗದಿ ಮಾಡಿದ್ದೇ 11 ಗಂಟೆಗೆ‌.ಇದು ನಾಡ ಹಬ್ಬ ನಾನು ಜನರ ಜೊತೆ ಬೆರೆಯಬೇಕು.ಆದ್ದರಿಂದ 15 ನಿಮಿಷ ತಡವಾಗಿದೆ.ಅವರು ಇದ್ದಕ್ಕೆ ಕೋಪ ಮಾಡಿಕೊಂಡು ಹೋಗಿದ್ದಾರೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: