ಮೈಸೂರು

ಕಬ್ & ಬುಲ್ ಬುಲ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ

%e0%b2%ac%e0%b3%81%e0%b2%b2-1ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಿಸ್ತು, ಜವಾಬ್ದಾರಿಯ ಜೊತೆ ಏಕತೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಸಲಹೆ ನೀಡಿದರು.

ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಅಡಕನ ಹಳ್ಳಿ ಕೈಗಾರಿಕಾ ಪ್ರದೇಶದ ವಿ.ಪಿ.ನಾಯ್ಡು ನಗರದಲ್ಲಿ ನಡೆಯುತ್ತಿರುವ ಜಾಂಬೂರಿ ಉತ್ಸವದ ಕಬ್ &ಬುಲ್ ಬುಲ್  ಶತಮಾನೋತ್ಸವ ಕಾರ್ಯಕ್ರಮಕ್ಕೆ ಬುಧವಾರ ತನ್ವೀರ್ ಸೇಠ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮೈಸೂರಿನಲ್ಲಿ ಜಾಂಬೂರಿ ಉತ್ಸವ ಆಯೋಜಿಸಿರುವುದು ಅತ್ಯಂತ ಖುಷಿ ನೀಡಿದೆ. ಇಲ್ಲಿನ ಮಹಾರಾಜರು ಸ್ಕೌಟ್, ಗೈಡ್ ಕಬ್ಸ್ ಗಳಿಗೆ ಮಹತ್ವ ನೀಡಿದ್ದರು ಎಂದರು. ಸುಮಾರು 500ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಈ ಸಂದರ್ಭ ಶಾಸಕ ರಾಜ್ಯ ಸ್ಕೌಟ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಜಿ.ಟಿ.ದೇವೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: