ದೇಶಮನರಂಜನೆ

ಬಾಲಿವುಡ್ `ಬಿಗ್ ಬಿ’ ಬಣ್ಣ ಬಯಲು ಮಾಡುತ್ತೇನೆ ಎಂದ ಕೇಶವಿನ್ಯಾಸಗಾರ್ತಿ

ನವದೆಹಲಿ,ಅ.13-ಬಾಲಿವುಡ್ ನ `ಬಿಗ್ ಬಿ’ ನಟ ಅಮಿತಾಬ್ ಬಚ್ಚನ್ ವಿರುದ್ಧ ಪ್ರಸಿದ್ಧ ಕೇಶವಿನ್ಯಾಸಗಾರ್ತಿ ಸಪ್ನಾ ಭವ್ನಾನಿ ಕಿಡಿಕಾರಿದ್ದು, ಸದ್ಯದಲ್ಲೇ ನಿಮ್ಮ ಬಣ್ಣ ಬಯಲು ಮಾಡುತ್ತೇನೆಎಂದು ಟ್ವಿಟ್ ಮಾಡಿದ್ದಾರೆ.

`# ಮೀ ಟೂ’ ಅಭಿಯಾನ ಆರಂಭವಾದ ಬಳಿಕ ಬಾಲಿವುಡ್ ನ ನಿರ್ದೇಶಕ ಸಾಜಿದ್ ಖಾನ್, ನಟ ಅಲೋಕ್ ನಾಥ್, ನಾನಾ ಪಾಟೇಕರ್, ಗಾಯಕರಾದ ಕೈಲಾಶ್ ಖೇರ್, ಅನು ಮಲ್ಲಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. ಇದೀಗ ಅಮಿತಾಬ್ ಬಚ್ಚನ್ ಹೆಸರು ಕೇಳಿಬಂದಿದೆ.

ಮೀ ಟೂಆಂದೋಲನವನ್ನು ಬೆಂಬಲಿಸಿ ಅಮಿತಾಬ್ ಮಾಡಿದ್ದ ಟ್ವೀಟ್ ಒಂದನ್ನು ಟ್ವಿಟರ್ ಬಳಕೆದಾರರೊಬ್ಬರು ರಿಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಪ್ನಾ ಭವ್ನಾನಿ , ಇದು ಅತೀ ದೊಡ್ಡ ಸುಳ್ಳು. ನಿಮ್ಮ ಸತ್ಯ ಸದ್ಯದಲ್ಲೇ ಹೊರ ಬರಲಿದೆ. ಉಗುರು ಸಾಲದೇ ಇರುವುದರಿಂದ ನೀವು ಕೈಯನ್ನೇ ಕಚ್ಚುತ್ತಿದ್ದೀರಿ ಎಂದು ನಂಬಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: