ಮೈಸೂರು

ಅಪರಾಧ ತಡೆ ಮಾಸಾಚರಣೆ

ಮೈಸೂರಿನ ನಜರ್ ಬಾದ್ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ನಜರ್ ಬಾದ್ ಠಾಣೆಯ ಇನ್ಸ್‌ಪೆಕ್ಟರ್ ಶೇಖರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಉಪಸ್ಥಿತರಿದ್ದರು.

ಸರಗಳ್ಳತನ ತಡೆಗಟ್ಟುವ ಕ್ರಮ, ಅಪರಾಧ ತಡೆಯುವ ಕುರಿತು ಸಲಹೆ, ಬೆಟ್ಟಿಂಗ್ ದಂಧೆ ತಡೆ, ಸೈಬರ್ ಕ್ರೈಮ್ ಸೇರಿದಂತೆ  ಉಗ್ರವಾದ ಚಟುವಟಿಕೆಗಳ ಬಗ್ಗೆ ಇರಬೇಕಾದ ಎಚ್ಚರಿಕೆಯ ಬಗ್ಗೆ ಮಾಹಿತಿ ನೀಡಲಾಯಿತು.

ಈ ವೇಳೆ ಮಾತನಾಡಿದ ಇನ್ಸ್‌ಪೆಕ್ಟರ್ ಶೇಖರ್ ನಜರ್ ಬಾದ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಗಳು ನಡೆಯುತ್ತಿದ್ದರೆ ಆ ಕುರಿತು ಸಾರ್ವಜನಿಕ ರು ಯಾವುದೇ ಮುಲಾಜಿಲ್ಲದೆ ನಮಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು. ಜೊತೆಗೆ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು. ಜೊತೆಯಲ್ಲಿ, ಕೆಲವು ಸಲಹೆಯ ಜೊತೆಗೆ, ಸಾರ್ವಜನಿಕ ರು ಎಚ್ಚರಿಕೆಯಿಂದ ಇರಬೇಕಾದ ಕೆಲ ಅಂಶಗಳ ಬಗ್ಗೆಯೂ ಮಾಹಿತಿ ನೀಡಿದರು.

ನಜರ್ ಬಾದ್ ಠಾಣಾ ವ್ಯಾಪ್ತಿಯ ಸಾರ್ವಜನಿಕರು  ಕಾರ್ಯಕ್ರಮದ ಪ್ರಯೋಜನ ಪಡೆದರು.

Leave a Reply

comments

Related Articles

error: