ಮೈಸೂರು

ಜನಮನಸೂರೆಗೊಂಡ ತ್ರಿಭಾಷಾ ವಚನ ಗಾಯನ

ಮೈಸೂರು, ಅ.13:-ಜಗತ್ ಪ್ರಸಿದ್ಧ ಮೈಸೂರು ದಸರಾ ಉತ್ಸವದ ಅಂಗವಾಗಿ ಕಲಾಮಂದಿರದಲ್ಲಿ ಶುಕ್ರವಾರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಬುರಗಿಯ ಜಿ.ಚಂದ್ರಕಾಂತ್ ಅವರ ತ್ರಿಭಾಷಾ ವಚನ ಗಾಯನ ಎಲ್ಲರ ಮನ ಸೆಳೆಯಿತು.

ಬಸವಣ್ಣನವರ ವಚನಗಳನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್  ಭಾಷೆಗಳಲ್ಲಿ ಹಾಡುವ ಮೂಲಕ ಎಲ್ಲರ ಮನಸೂರೆಗೊಂಡರು. ಪ್ರಾರಂಭದಲ್ಲಿ ‘ಉಳ್ಳವರು ಶಿವಾಲಯ ಮಾಡುವರು’ ವಚನವನ್ನು ಮಧುವಂತಿ ರಾಗದಲ್ಲಿ ಸುಮಧುರವಾಗಿ ಹಾಡಿದರು. ನಂತರ ಕಲಾವತಿ ರಾಗದಲ್ಲಿ ‘ನಾದಪ್ರಿಯ ಶಿವನೆಂಬುವರು’, ಬಿಲಾಸಖಾನಿ ತೋಡಿ ರಾಗದಲ್ಲಿ ‘ಸ್ವಾಮಿ ನೀನು ಶಾಶ್ವತ ನೀನು’ ಜೀವನಪುರಿ ರಾಗದಲ್ಲಿ ‘ಕಳಬೇಡ ಕೊಲಬೇಡ’  ವಚನಗಳನ್ನು ಸುಮಧುರವಾಗಿ   ಹಾಡಿದರು. ಭೈರವ ರಾಗದಲ್ಲಿ ‘ಪಾಪಿಯಧನ ಪ್ರಾಯಶ್ಚಿತ್ತಕಲ್ಲದೆ’ ವಚನ ಗಾಯನದ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಿದರು.

ತ್ರಿಭಾಷಾ ವಚನ ಗಾಯನ ಕಾರ್ಯಕ್ರಮದಲ್ಲಿ ಗುರುಶಾಂತಯ್ಯ ಸ್ಥಾವರಮಠ ಹಾರ್ಮೊನಿಯಂಗೆ,ವೀರಭದ್ರಯ್ಯ ಸ್ಥಾವರಮಠ ತಬಲಾಗೆ ಸಾಥ್ ನೀಡಿದರು. ಜಿಎಸ್ಎಸ್ ನ ನಿವೃತ್ತ ಪ್ರಾಚಾರ್ಯ ಪ್ರೊ. ರಾಮಮೂರ್ತಿರಾವ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಅಧಿಕಾರಿ  ಕುಮಾರಸ್ವಾಮಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: