ಕ್ರೀಡೆಮೈಸೂರು

ಮುಖ್ಯಮಂತ್ರಿ ಕಪ್ ಆಂಧ್ರ ಮಡಿಲಿಗೆ

ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಮೃತಮಹೋತ್ಸವ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ನಡೆದ 19ನೆಯ ಅಖಿಲ ಭಾರತ ವಕೀಲರ ಕ್ರಿಕೆಟ್ ಪಂದ್ಯಾವಳಿಗೆ ಸಂಭ್ರಮದ ತೆರೆ ಬಿದ್ದಿದ್ದು, ಅವಿಭಜಿತ ಆಂಧ್ರಪ್ರದೇಶದ ವಕೀಲರ ತಂಡ ಮುಖ್ಯಮಂತ್ರಿಗಳ ಕಪ್ ನ್ನು ಮುಡಿಗೇರಿಸಿಕೊಂಡಿದೆ.

ಬಲಿಷ್ಠ ತಂಡವಾದ ಆಂಧ್ರಪ್ರದೇಶದ ವಕೀಲರ ತಂಡ ಸರ್ವೋಚ್ಛ ನ್ಯಾಯಾಲಯದ ವಕೀಲರ ತಂಡವನ್ನು ನಿರಾಯಾಸವಾಗಿ ಮಣಿಸಿದೆ. 20ಓವರ್ಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಂಧ್ರ-ತೆಲಂಗಾಣ ವಕೀಲರು 57ರನ್ ಗಳಿಂದ ಸುಪ್ರೀಂಕೋರ್ಟ್ ವಕೀಲರ ತಂಡವನ್ನು ಮಣಿಸಿದರು.

Leave a Reply

comments

Related Articles

error: