ಸುದ್ದಿ ಸಂಕ್ಷಿಪ್ತ

ಬೆಂಗಾಲಿ ಅಸೋಸಿಯೇಷನ್ ನಿಂದ ದುರ್ಗಾ ಪೂಜೆ

ಮೈಸೂರು,ಅ.13 : ಬೆಂಗಾಲಿ ಅಸೋಸಿಯೇಷನ್ ಮೈಸೂರು ವತಿಯಿಂದ ನವರಾತ್ರಿ ಪ್ರಯುಕ್ತ ದುರ್ಗಾ ಪೂಜೆಯನ್ನು ಅ.14 ರಿಂದ 19ರವರೆಗೆ ಕೆಆರ್. ಎಸ್ ಮುಖ್ಯ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಛತ್ರದಲ್ಲಿ ಏರ್ಪಡಿಸಲಾಗಿದೆ.

ಅ.15ರಂದು ಮುಖ್ಯ ಪೂಜೆ ನಡೆಯಲಿದೆ, ಅ.17ರಂದು ದುರ್ಗಾಷ್ಠಮಿ ಹಾಗೂ 19 ರಂದು ವಿಸರ್ಜನೆ ನೆರವೇರಿಸಲಾಗುವುದು. ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಧಾರ್ಮಿಕ ನೃತ್ಯವನ್ನು ಮಾಡಲಾಗುವುದು ಎಂದು ಅಧ್ಯಕ್ಷ ಸುಜೀತ್ ದತ್ ಹೇಳಿಕೆ ನೀಡಿದ್ದಾರೆ. (ಕೆ.ಎಂ.ಆರ್)

 

Leave a Reply

comments

Related Articles

error: