ಮೈಸೂರು

ನಂಜುಂಡನ ಸನ್ನಿಧಿಯಲ್ಲಿ ಒಂದು ಕೋಟಿ 21 ಲಕ್ಷ ರೂ.ಹಣ ಸಂಗ್ರಹ

ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ದಾಖಲೆಯ ಮೊತ್ತ ಸಂಗ್ರಹವಾಗಿದೆ. ಇದೇ ಮೊದಲ ಬಾರಿಗೆ ಬರೋಬ್ಬರಿ 1ಕೋಟಿ 20ಲಕ್ಷ ರೂ ಹಣ ಸಂಗ್ರಹವಾಗಿದೆ.
ಒಂದು ಕೋಟಿ ಹತ್ತು ಲಕ್ಷವೇ ನಂಜನಗೂಡಿನಲ್ಲಿ ದಾಖಲೆಯ ಮೊತ್ತವಾಗಿತ್ತು. ಆದರೆ ಈ ಬಾರಿ ಈ ಪ್ರಮಾಣ ಹೆಚ್ಚಾಗಿದ್ದು, ದಾಖಲೆ ನಿರ್ಮಾಣವಾಗಿದೆ.

ಕೋಟಿ ಸಾಲಿನಲ್ಲಿ ನಂಜುಂಡ

ದಕ್ಷಿಣ ಕಾಶಿ ಎಂದೆ ಪ್ರಸಿದ್ದವಾಗಿರುವ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಈ ತಿಂಗಳ ಹುಂಡಿ ಎಣಿಕೆಯಲ್ಲಿ ಒಟ್ಟು 1,20,85,816 ರೂ ಹಣ ಸಂಗ್ರಹವಾಗಿದೆ. ಇದರಲ್ಲಿ ಅಮಾನ್ಯಗೊಂಡ  ಸಾವಿರ ಮುಖ ಬೆಲೆಯ 4,40,000 ರೂ.ಗಳು ಹಾಗೂ ಹಳೆ 500 ಮುಖ ಬೆಲೆಯ 12,29,500 ರೂ.ಗಳು ದೊರೆತಿದೆ. ಇದಲ್ಲದೆ 21 ವಿದೇಶಿ ನೋಟುಗಳು 75ಗ್ರಾಂ ಚಿನ್ನ, 2,900ಗ್ರಾಂ ಬೆಳ್ಳಿ ದೊರೆತಿದೆ. ಇದರಂತೆ ಕೋಟಿ ಸಾಲಿನ ದೇವರುಗಳಲ್ಲಿ ಇದೀಗ ನಂಜುಂಡನು ಸೇರ್ಪಡೆಗೊಂಡಿರೋದು ವಿಶೇಷ.

ಬ್ಯಾಂಕ್ ಸಿಬ್ಬಂದಿಗಳಿಂದ ಹಣ ಎಣಿಕೆ.

ದೊಡ್ಡ ಪ್ರಮಾಣದ ಹಣವನ್ನು ಬ್ಯಾಂಕ್ ಸಿಬ್ಬಂದಿಗಳಿಂದ ಎಣಿಕೆ ಮಾಡಿಸಲಾಗಿದೆ. ಈ ವೇಳೆ ಸಿಸಿಟಿವಿ ಕ್ಯಾಮರಾ ಅಳವಡಿಸಿ ಹಣ ಎಲ್ಲಿಯೂ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಈ ವೇಳೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಗೂ ದೇಗುಲದ ಆಡಳಿತ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

comments

Related Articles

error: