ಮೈಸೂರು

ಜಾಂಬೂರಿ ಉತ್ಸವ : ಸೂಕ್ತ ಪೊಲೀಸ್ ಬಂದೋಬಸ್ತ್

police-webನಂಜನಗೂಡು ಠಾಣಾ ಸರಹದ್ದು ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ವಿ.ಪಿ.ದೀನದಯಾಳ ನಾಯ್ಡುನಗರದಲ್ಲಿ 17ನೇ ರಾಷ್ಟ್ರೀಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಾಂಬೂರಿ ಕಾರ್ಯಕ್ರಮ ಡಿ.29ಇಂದು) ನಡೆಯಲಿದ್ದು, ವಿವಿಧೇಡೆಗಳಿಂದ ಸುಮಾರು 30,000ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ತಿರುವನಂತಪುರಂ ಹೆಲಿಪ್ಯಾಡ್ ನಿಂದ IAF BBJ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ರಸ್ತೆಯ ಮೂಲಕ ಅಡಕನಹಳ್ಳಿಗೆ ಆಗಮಿಸಲಿದ್ದಾರೆ. ಈ ಪ್ರಯುಕ್ತ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮೈಸೂರು ಜಿಲ್ಲೆ ಹಾಗೂ ಹೊರಜಿಲ್ಲೆಯ ಅಧಿಕಾರಿ-ಸಿಬ್ಬಂದಿಗಳನ್ನು, ಕೆ.ಎಸ್.ಆರ್.ಪಿ/ಡಿ.ಎ.ಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಪೊಲೀಸ್ ಅಧಿಕ್ಷಕರು-1, ಅಪರ ಪೊಲೀಸ್ ಅಧೀಕ್ಷಕರು-3, ಪೊಲೀಸ್ ಉಪಾಧೀಕ್ಷಕರು-10, ಪೊಲೀಸ್ ನಿರೀಕ್ಷಕರು -32, ಮಹಿಳಾ ಪೊಲೀಸ್ ನಿರೀಕ್ಷಕರು-1, ಪೊಲೀಸ್ ಉಪನಿರೀಕ್ಷಕರು-47, ಮಹಿಳಾ ಪೊಲೀಸ್ ಉಪನಿರೀಕ್ಷಕರು-8, ಪೊಲೀಸ್ ಸಿಬ್ಬಂದಿಗಳು-1306, ಮಹಿಳಾ ಪೊಲೀಸ್ ಸಿಬ್ಬಂದಿಗಳು-150, ಗೃಹರಕ್ಷಕ ಸಿಬ್ಬಂದಿಗಳು-292, ಕೆ.ಎಸ್.ಆರ್.ಪಿ(ಒಟ್ಟು ಅಧಿಕಾರಿ&ಸಿಬ್ಬಂದಿಗಳು)-5, (100 ಸಿಬ್ಬಂದಿಗಳು), ಡಿ.ಎ.ಆರ್ (ಒಟ್ಟು ಅಧಿಕಾರಿ & ಸಿಬ್ಬಂದಿಗಳು)-4, (50ಸಿಬ್ಬಂದಿಗಳು), ಒಟ್ಟು 2000 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ದಿನದ 24 ಗಂಟೆಗಳೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 10ವಾಚ್ ಟವರ್ ಗಳನ್ನು ನಿಯೋಜಿಸಿದ್ದು, ಸೂಕ್ತ ಪೊಲೀಸ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Leave a Reply

comments

Related Articles

error: