ಮೈಸೂರು

ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡುವಾಗ ಮುಗ್ಗರಿಸಿ ಬಿದ್ದ ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಅ.14:-  ಓಡುವಾಗ  ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಮುಗ್ಗರಿಸಿ ಬಿದ್ದ  ಘಟನೆ ನಡೆದಿದೆ.

ದಸರಾ ಮಹೋತ್ಸವದ ಅಂಗವಾಗಿ ಹಾಫ್ ಮ್ಯಾರಥಾನ್ ಸ್ಪರ್ಧೆಯನ್ನು ಇಂದು ಆಯೋಜಿಸಲಾಗಿತ್ತು. ಅವರು ಸ್ಪರ್ಧೆಗೆ ಚಾಲನೆ ನೀಡಿ ಬಳಿಕ ಅಥ್ಲೀಟ್ ಗಳೊಂದಿಗೆ ಓಡಲು ತೊಡಗಿದರು. ಸ್ವಲ್ಪ ದೂರ ಉತ್ಸಾಹದಿಂದಲೇ ಓಡಿದ್ದರು.  ಅವರು ಪಂಚೆಯಲ್ಲೇ ಓಡುತ್ತಿದ್ದರು.   ಪಂಚೆ ಕಾಲಿಗೆ ಸಿಕ್ಕಿ ಮುಗ್ಗರಿಸಿ ರಸ್ತೆಗೆ ದೊಪ್ಪನೆ ಬಿದ್ದರು.  ಕೂಡಲೇ ಸಚಿವರನ್ನು ಸ್ಥಳೀಯರು, ಮಾಧ್ಯಮ‌ ಪ್ರತಿನಿಧಿಗಳು ಮೇಲೆತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: