
ಮೈಸೂರು
ಅರಮನೆ ಆವರಣದಲ್ಲಿ ಯೋಗ; ಆರೋಗ್ಯ ಸುಧಾರಣೆಗೆ ಯೋಗಭ್ಯಾಸ ತುಂಬಾ ಒಳ್ಳೆಯದು : ಸಚಿವ ಸಾ.ರಾ.ಮಹೇಶ್
ಮೈಸೂರು,ಅ.14:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2018ರ ಪ್ರಯುಕ್ತ ಅರಮನೆ ನಗರಿಯಲ್ಲಿ ಯೋಗದಸರಾವನ್ನು ಹಮ್ಮಿಕೊಳ್ಳಲಾಗಿದ್ದು,ಇಂದು ಬೆಳಿಗ್ಗೆ ಅರಮನೆ ಆವರಣದಲ್ಲಿ ಯೋಗ ದಸರಾ ನಡೆಯಿತು. ಯೋಗ ದಸರಾ ಕಾರ್ಯಕ್ರಮಕ್ಕೆ ಸಚಿವ ಸಾರಾ ಮಹೇಶ್ ಮತ್ತು ಜಿ.ಟಿ.ದೇವೇಗೌಡ ಅವರು ಚಾಲನೆ ನೀಡಿದರು.
ಯೋಗಮಾಡುವುದರ ಮೂಲಕ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಯೋಗ ನಮ್ಮ ಆರೋಗ್ಯ ದ ಪ್ರಮುಖ ಅಂಗ. ಪ್ರತಿನಿತ್ಯ ನಾವು ಯೋಗವನ್ನು ಮಾಡಬೇಕು. ನಮ್ಮ ಆರೋಗ್ಯ ಸುಧಾರಣೆಗೆ ಯೋಗಭ್ಯಾಸ ತುಂಬಾ ಒಳ್ಳೆಯದು. ನಮ್ಮ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ದೇಹದ ಸಮತೋಲನ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಬಹುಮುಖ್ಯ ಎಂದರು.
ನೂರಾರು ಯೋಗಪಟುಗಳು ಪಾಲ್ಗೊಂಡು ಯೋಗ ಪ್ರದರ್ಶನ ನೀಡಿದರು. (ಕೆ.ಎಸ್,ಎಸ್.ಎಚ್)