ಮೈಸೂರು

ದಸರಾ ಓಟದ ಸ್ಪರ್ಧೆಗೆ ಚಾಲನೆ : ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾದ ಓಟ

ಮೈಸೂರು,ಅ.14:- ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಹಾಗೂ ಒಲಿಂಪಿಕ್ ಸಂಸ್ಥೆಯ ಸಹಯೋಗದಲ್ಲಿ ದಸರಾ ಓಟದ ಸ್ಪರ್ಧೆಯನ್ನು ಇಂದು ಆಯೋಜಿಸಲಾಗಿತ್ತು.

ನಗರದ ಓವೆಲ್ ಮೈದಾನದಲ್ಲಿ ಸ್ಪರ್ಧೆ ನಡೆದಿದ್ದು, 10 ಕಿ.ಮೀ. 6 ಕಿ.ಮೀ. 5.ಕಿ.ಮೀ. 3-2 ಕಿ.ಮೀ. ದೂರದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಓಟದ ಸ್ಪರ್ಧೆಗೆ ಸಣ್ಣ ಕೈಗಾರಿಕೆ ಸಚಿವ ಎನ್. ಆರ್. ಶ್ರೀನಿವಾಸ್ ಹಾಗೂ ಉಸ್ತುವಾರಿ ಸಚಿವ ಜಿ.ಟಿ.ದೇವೆಗೌಡ ಅವರು ಚಾಲನೆ ನೀಡಿದರು. ಸಚಿವರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಸಾಥ್ ನೀಡಿದರು. ಸುಮಾರು 3 ಸಾವಿರ ಮಂದಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು, ಮಕ್ಕಳು , ವಯಸ್ಕರು, ಹಿರಿಯ ನಾಗರಿಕರು, ಕುಬ್ಜರು ಪಾಲ್ಗೊಂಡಿದ್ದರು. ಸುಮಾರು 1.45 ಗಂಟೆ ತಡವಾಗಿ ಓಟದ ಕಾರ್ಯಕ್ರಮ ಆರಂಭವಾಗಿತ್ತು. ವೇದಿಕೆಗೆ ಮೂವರು ಸಚಿವರು ತಡವಾಗಿ ಆಗಮಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: