ಮೈಸೂರು

ನಂಜನಗೂಡು ರಸ್ತೆಯಲ್ಲಿ ಸಂಚಾರ ನಿರ್ಬಂಧ

ನಂಜನಗೂಡಿನ ಅಡಕನಹಳ್ಳಿಯಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿ.29ರಂದು ಮಧ್ಯಾಹ್ನ 1ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮೈಸೂರಿನಿಂದ ನಂಜನಗೂಡು ಕಡೆ ಹೋಗುವ ರಸ್ತೆಯಲ್ಲಿ ಬಂಡಿಪಾಳ್ಯದ ಬಳಿ ರಿಂಗ್ ರಸ್ತೆಯಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮೈಸೂರು ಕಡೆಯಿಂದ ನಂಜನಗೂಡು ಕಡೆಗೆ ತೆರಳುವ ವಾಹನಗಳು ಬಂಡಿಪಾಳ್ಯದ  ರಿಂಗ್ ರಸ್ತೆಯಲ್ಲಿ ಬಲಕ್ಕೆ, ರಿಂಗ್ ರಸ್ತೆಯಲ್ಲಿ ಸಾಗಿ ಶ್ರೀರಾಂಪುರದ ಬಳಿ ಎಡಕ್ಕೆ ತಿರುಗಿ  ಹೆಚ್.ಡಿ.ಕೋಟೆ(ಮಾನಂದವಾಡಿ ರಸ್ತೆ)ಮೂಲಕ ವರಸಯ್ಯನ ಹುಂಡಿ, ಕೋಟೆ ಹುಂಡಿ, ಉದ್ಭೂರು ಗೇಟ್, ತಳ್ಳೂರು ಮುಖಾಂತರ ಕಡಕೊಳ ತಲುಪಿ ಅಲ್ಲಿ ಮೈಸೂರು ನಂಜನಗೂಡು ರಸ್ತೆಗೆ ಸೇರಿ ಮುಂದೆ ಸಾಗಬೇಕು.

ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

Leave a Reply

comments

Related Articles

error: