ಮೈಸೂರು

ಅಲ್ಪಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ

ಮೈಸೂರು,ಅ.15:- ಅಲ್ಪಸಾಲಕ್ಕೆ ಹೆದರಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಸಾಗರೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ವೆಂಕಟೇಶ ಅವರ ಪತ್ನಿ ರೇಖಾ (25) ಎಂದು ಗುರುತಿಸಲಾಗಿದ್ದು, ಕಪಿಲಾ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮೈಸೂರಿನ ಜೆ.ಪಿ.ನಗರದಲ್ಲಿ ಸಿದ್ದಪ್ಪಾಜೀ ಮಹಿಳಾ ಸ್ವಸಹಾಯ ಸಂಘದಿಂದ 25ಸಾವಿರ ಸಾಲ ಪಡೆದುಕೊಂಡಿದ್ದರು. ಮೈಸೂರಿನ ಜೆ.ಪಿ.ನಗರದಲ್ಲಿ ಬಾಡಿಗೆ ಮನೆ ಪಡೆದು ಜೀವನ ನಡೆಸುತ್ತಿದ್ದರು. ಸಾಲಕಟ್ಟಲು ಆಗದೇ ಹೆದರಿ ತಂದೆ ಮನೆಯಾದ  ಸಾಗರೆ  ಗ್ರಾಮಕ್ಕೆ ಬಂದು ವಾಸವಾಗಿದ್ದರು. ಸಾಲ ತೆಗೆದುಕೊಂಡು ಹಣ ಕಟ್ಟದೆ ಇರುವುದರಿಂದ ಸಂಘದ  ಏಳು ಜನ ಮಹಿಳೆಯರು ನಿನ್ನೆ ಸಾಗರೆಗೆ ತೆರಳಿ ಹಣ ಕಟ್ಟುವಂತೆ ಕೇಳಿದ್ದಾರೆ. ಇದರಿಂದ ಹೆದರಿದ ರೇಖಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರಿಗೆ ಐದು ವರ್ಷದ ಗಂಡು ಮಗುವಿದೆ

ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: