ಕ್ರೀಡೆ

ವಿಜಯ್ ಹಜಾರೆ ಟ್ರೋಫಿ: ಸೆಮಿಫೈನಲ್ ಗೆ ಲಗ್ಗೆಯಿಟ್ಟ ಮುಂಬೈ, ದೆಹಲಿ

ಬೆಂಗಳೂರು,.15- ಇಲ್ಲಿನ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಮುಂಬೈ ಮತ್ತು ದೆಹಲಿ ತಂಡಗಳು ಸೆಮಿಫೈನಲ್ ಹಂತಕ್ಕೇರಿವೆ.

ಮೊದಲ ಕ್ವಾರ್ಟರ್ನಲ್ಲಿ ಬಿಹಾರ ವಿರುದ್ಧ ಮುಂಬೈ 9 ವಿಕೆಟ್ಗಳ ಜಯ ಸಾಧಿಸಿದರೆ, 2ನೇ ಕ್ವಾರ್ಟರ್ನಲ್ಲಿ ದೆಹಲಿ, ಹರ್ಯಾಣ ವಿರುದ್ಧ 5 ವಿಕೆಟ್ಗಳ ಜಯ ಪಡೆದು ಉಪಾಂತ್ಯ ಪ್ರವೇಶಿಸಿದವು.

ಮೊದಲು ಬ್ಯಾಟ್ ಮಾಡಿದ ಬಿಹಾರ 28.2 ಓವರ್ಗಳಲ್ಲಿ ಕೇವಲ 69 ರನ್ಗಳಿಗೆ ಆಲೌಟ್ ಆಯಿತು. ಮುಂಬೈ ಪರ ತುಷಾರ್ 5, ಮುಲಾನಿ 3 ವಿಕೆಟ್ ಪಡೆದರು. ಅಲ್ಪ ಗುರಿ ಬೆನ್ನಟ್ಟಿದ ಮುಂಬೈ 12.3 ಓವರ್ಗಳಲ್ಲಿ 1 ವಿಕೆಟ್ಗೆ 70ರನ್ಗಳಿಸಿ ಜಯದ ನಗೆ ಬೀರಿತು. ರೋಹಿತ್ ಶರ್ಮಾ (33) ರನ್ಗಳಿಸಿದರು.

ಮತ್ತೊಂದು ಕ್ವಾರ್ಟರ್ಫೈನಲ್ನಲ್ಲಿ ನಾಯಕ ಗೌತಮ್ ಗಂಭೀರ್ (104) ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ದೆಹಲಿ ತಂಡ, ಹರ್ಯಾಣ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹರ್ಯಾಣ 49.1 ಓವರ್ಗಳಲ್ಲಿ 229 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದೆಹಲಿ ತಂಡ 39.2 ಓವರ್ಗಳಲ್ಲಿ 5 ವಿಕೆಟ್ಗೆ 230 ರನ್ಗಳಿಸಿತು.

3ನೇ ಕ್ವಾರ್ಟರ್ಫೈನಲ್ನಲ್ಲಿ ಮಹಾರಾಷ್ಟ್ರ ತಂಡ, ಜಾರ್ಖಂಡ್ ತಂಡವನ್ನು ಎದುರಿಸಲಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮತ್ತೊಂದು ಕ್ವಾರ್ಟರ್ನಲ್ಲಿ ಹೈದ್ರಾಬಾದ್, ಆಂಧ್ರಪ್ರದೇಶ ಎದುರು ಸೆಣಸಲಿದೆ. ಪಂದ್ಯ ಜಸ್ಟ್ ಕ್ರಿಕೆಟ್ ಅಕಾಡೆಮಿ (ಜೆಸಿಎ) ಯಲ್ಲಿ ನಡೆಯಲಿದೆ. (ಎಂ.ಎನ್)

Leave a Reply

comments

Related Articles

error: