ಕರ್ನಾಟಕಮೈಸೂರು

ಕಾವೇರಿ ಜಲವಿವಾದ: ರಾಜ್ಯದ ಎಡವಟ್ಟುಗಳ ಪಟ್ಟಿಮಾಡಿದ ನಿವೃತ್ತ ನ್ಯಾಯಾಧೀಶ ಸಿ. ಶಿವಪ್ಪ

ಕಾವೇರಿ ನೀರಿನ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ, ಸಮರ್ಥವಾದ ವಕೀಲರ ಮೂಲಕ ಸುಪ್ರೀಂ ಕೋರ್ಟ್ ಗೆ ವಾಸ್ತವಾಂಶ ನೀಡಿಲ್ಲ, ನಿವೃತ್ತ ನ್ಯಾಯಾಧೀಶರೊಂದಿಗೆ ಸಮಾಲೋಚನೆ ನಡೆಸಿಲ್ಲ, ವಾಸ್ತವತೆಯ ಬಗ್ಗೆ ಅಂಕಿ ಅಂಶ ನೀಡಿಲ್ಲ… ಹೀಗೆ ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರ ಮಾಡಿದ ಎಡವಟ್ಟುಗಳನ್ನು ಒಂದೊಂದಾಗಿ ಪಟ್ಟಿ ಮಾಡಿದ್ದು ಮದ್ರಾಸ್ ಮತ್ತು ಕರ್ನಾಟಕ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಸಿ.ಶಿವಪ್ಪ.

ಅವರು ನಗರದಲ್ಲಿಂದು ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜಲಾಶಯದ ನೀರಿನಲ್ಲಿ ಶೈಕ್ಷಣಿಕ, ಆರೋಗ್ಯ, ಪ್ರಯೋಗಾಲ, ವಿದ್ಯುತ್ ಉತ್ಪಾದನೆ, ಕುಡಿಯುಲು ಇಂತಿಷ್ಟು ನೀರನ್ನು  ಆದ್ಯತೆ ಮೇರೆಗೆ ಮೀಸಲಿಡಬೇಕು ಆನಂತರ ಕೃಷಿಗೆ ಬಳಸಲಾಗುವುದು, ಪ್ರಸಕ್ತ ಸಾಲಿನಲ್ಲಿ ಪ್ರಕೃತಿ ಮುನಿಸಿನಿಂದಾಗಿ ಮೂಲಭೂತ ಅಗತ್ಯಗಳಿಗೆ  ನೀರಿನ ಸಮಸ್ಯೆ ಎದುರಾಗಿದೆ ಆದರೆ ತಮಿಳುನಾಡು ಸಾಂಬಾ ಬೆಳೆಗೆ ನೀರು ಕೇಳುತ್ತಿದ್ದು ಇದನ್ನು ಮುಖ್ಯಮಂತ್ರಿಗಳು ತಜ್ಞ ನ್ಯಾಯ್ಯಾಧೀಶರೊಂದಿಗೆ ಸಮಾಲೋಚನೆ ನಡೆಸಿ ಮುನ್ನಡಿಯಿಡಬಹುದಿತ್ತು, ಕಾವೇರಿ ಕೊಳ್ಳದ ವಾಸ್ತವ ಚಿತ್ರಣವನ್ನು ಸುಪ್ರೀಂ ಕೋರ್ಟಿಗೆ ನೀಡಲು ವಿಫಲವಾಗಿದೆ. ರಾಜ್ಯ ಸರ್ಕಾರವು ಯಾವುದೇ ನಿಖರವಾದ ಅಂಕಿ ಅಂಶಗಳನ್ನು ಸುಪ್ರೀಂ ಕೋರ್ಟಿಗೆ ನೀಡದೆ ರಾಜ್ಯದಲ್ಲಿ ಸಾರ್ವಜನಿಕರು ಪ್ರತಿಭಟಿಸುತ್ತಿದ್ದಾರೆ. ದೊಂಬಿ, ಗಲಾಟೆಯ ನೆಪ ಹೇಳಿ ನೀರು ಬಿಡುಗಡೆ ಮಾಡುವುದಿಲ್ಲ ಎಂದು ವಾದ ಮಂಡಿಸಿದರೆ ಅದು ಅಬಾಲಿಶ, ಅನ್ನಭಾಗ್ಯ- ಕ್ಷೀರ ಭಾಗ್ಯದಿಂದ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕಬಿನಿ, ಹಾರಂಗಿ ಜಲಾಶಯಗಳ ಅಣೆಕಟ್ಟೆ ಎತ್ತರ ಹೆಚ್ಚಿಸಿ, ಚೆಕ್ ಡ್ಯಾಂ ನಿರ್ಮಿಸಿ, ಹೂಳು ತೆಗೆದು ನೀರು ಶೇಖರಣೆ ಮಾಡಿ, ಕೆರೆ ಕಟ್ಟೆಗಳಿಗೆ ನೀರು ಹರಿಸಿ, ನೀರು ಶೇಖರಿಸಲು ಸಹಾಯವಾಗುವುದು, ಪ್ರತಿ ಎಕರೆಗೆ 25 ಸಾವಿರ ರೂಗಳ ಸಹಾಯ ಧನವನ್ನು ರೈತರಿಗೆ ನೀಡಿ, ನೀರಾವರಿಗೆ ಹೆಚ್ಚಿನ ಅನುದಾನ ಮೀಸಲಿಡಿ. ಕುಡಿಯಲು ನೀರಿಲ್ಲದಿದ್ದರೂ ಬೆಳೆಗೆ ಕೊಡುತ್ತೇನೆ ಎಂದು ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಸುಳ್ಳು ಹೇಳುತ್ತಿದ್ದಾರೆ, ಜನಪ್ರತಿನಿಧಿಗಳು ಪ್ರಾಮಾಣಿಕತೆವಾಗಿ ವರ್ತಿಸಬೇಕು ಎಂದು ಕಿವಿ ಮಾತು ಹೇಳಿದರು.

ನೈಸರ್ಗಿಕ ಸಂಪನ್ಮೂಲ ಯಾರದ್ದೇ ಸ್ವತ್ತಲ್ಲ : ನೀರಾವರಿ ತಜ್ಞ ಶಿವರಾಮಯ್ಯ ನೇತ್ರಾವತಿ ನದಿಯ 200 ಟಿ.ಎಂ.ಸಿ. ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದು ಇದನ್ನು ತಿರುಗಿಸಿದರೆ ಕುಡಿಯುವ ನೀರಿನ ಬವಣೆ ನೀಗುವುದೆಂದು ವರದಿ ನೀಡಿದ್ದರು, ಅದನ್ನು ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಅಲ್ಲಿನ ನಿವಾಸಿಗಳು ಯೋಜನೆಯನ್ನು ವಿರೋಧಿಸುತ್ತಿರುವುದು ಖಂಡನೀಯ. ಪ್ರಕೃತಿ ಸಂಪನ್ಮೂಲ ಯಾರದ್ದೇ ಮನೆಯ ಸ್ವತ್ತಲ್ಲ. ಕಾವೇರಿ ನೀರು ಹಂಚಿಕೆ ಗಲಾಟೆಯಲ್ಲಿ ಈಚೆಗೆ ದೊಂಬಿಕೋರರು ತಮ್ಮ ಮನೆ ಮೇಲೆ ಕಲ್ಲು ತೂರಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಪುಢಾರಿಗಳಿಗೆ ರಕ್ಷಣೆ ನೀಡುತ್ತದೆ. ಒಬ್ಬ ನ್ಯಾಯಾಧೀಶರ ಮನೆಗೆ ಸೆಕ್ಯೂರಿಟಿ ಹಾಕಲು ಹಿಂದು ಮುಂದೆ ನೋಡುತ್ತಿದೆ ಎಂದು ವ್ಯಂಗ್ಯವಾಡಿದರು.

ತಮಿಳುನಾಡಿನಲ್ಲಿ 30 ಸಾವಿರ ಕಿ.ಮೀ. ಕಾವೇರಿ ನದಿ ಹರಿಯುವುದು, ಆ ಪ್ರದೇಶದಲ್ಲಿ ಸುಮಾರು 35 ಸಾವಿರ ಬಾವಿಗಳನ್ನು ರೈತರು ತೊಡಿದ್ದು ಒಂದೊಂದು ಬಾವಿಯು ಎರಡು ಸಾವಿರ ಅಡಿಯಿವೆ, ಅವುಗಳಲ್ಲಿ ಭರ್ತಿಯಾಗುವ ನೀರೇ ಆ ಪ್ರದೇಶದ ರೈತರ ಬೆಳೆಗಳಿಗೆ ಸಾಕಾಗುವುದು, ಆದರೆ ರಾಜ್ಯದ ರೈತರಿಗೆ ಈ ರೀತಿಯ ಯಾವ ಸವಲತ್ತುಗಳೂ ಇಲ್ಲ. ಕೇವಲ ಜಲಾಶಯದ ನೀರನ್ನೇ ಆಶ್ರಯಿಸಿದ್ದು ಸಮಸ್ಯೆಗಳು ಮತ್ತಷ್ಟು ಜಟಿಲವಾಗುತ್ತಿದೆ.

ನ್ಯಾಯಾಲಯದ ಗೌರವ  ಎತ್ತಿ ಹಿಡಿಯಿರಿ: ಎಲ್ಲಿ ನ್ಯಾಯಾಲಯದ ಗೌರವವನ್ನು ಎತ್ತಿ ಹಿಡಿಯುವುದಿಲ್ಲವೋ ಆ ಸಮಾಜಕ್ಕೆ ಉಳಿಗಾಲವಿಲ್ಲ. ಭಾರತದ ಸಾರ್ವಭೌಮತೆಯ ಸಂಕೇತವಾದ ಸುಪ್ರೀಂಕೋರ್ಟ್ ನ ಘನತೆಯನ್ನು ಎತ್ತಿ ಹಿಡಿಯಬೇಕು, ನ್ಯಾಯಾಲಯವು ಮಾನವೀಯತೆಯ ದೃಷ್ಟಿಯಲ್ಲಿರಿಸಿಕೊಂಡೆ ತೀರ್ಪು ನೀಡುತ್ತದೆ. ಆದರೆ ತೀರ್ಪಿನ ಕುರಿತು ಹೀಗಳೆಯುವುದು ಸರಿಯಲ್ಲ. 1911 ರಲ್ಲಿ ಅಂದಿನ ಮದ್ರಾಸ್ – ಮೈಸೂರು ಸರ್ಕಾರಗಳು ಮಾಡಿಕೊಂಡ ಒಪ್ಪಂದ ಪ್ರಸ್ತುತ ಕಾಲಮಾನಕ್ಕೆ ಹೊಂದುವುದಿಲ್ಲ. ಒಂಪಂದಕ್ಕೆ ಮಾರ್ಪಡು ಆಗಲೇ ಬೇಕು.

ಬಂದ್ ಗೆ ಕರೆ ನೀಡಬೇಡಿ : ಸಾರ್ವಜನಿಕರ ಜನ ಜೀವನ ತೊಂದರೆಯಾಗುವಂತಹ ದೊಂಬಿ-ಗಲಾಟೆ ಕಲ್ಲು ತೂರಾಟ, ರಸ್ತೆಗೆ ವಾಹನಗಳಿಗೆ ಬೆಂಕಿ ಹಾಕುವ ಪ್ರತಿಭಟನೆ ಎಂದಿಗೂ ಮಾಡಬೇಡಿ, ಇದರಿಂದ ಕೂಲಿಕಾರರ- ವ್ಯಾಪಾರಿಗಳ ಅನ್ನಕ್ಕೆ ಕನ್ನ ಬೀಳುವುದು. ಅದರ ಬದಲು ಶಾಂತಿಯುತವಾಗಿ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಹಾಗೆ ಬಂದ್ ನಡೆಸಿ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ, ಡಾ.ಎಸ್.ಎಂ.ಜಯರಾಂ, ವಕೀಲರಾದ ಶ್ಯಾಂ ಭಟ್ ಹಾಗೂ ಕಾಂಗ್ರೆಸ್ ಮುಖಂಡ ದಾಸೇ ಗೌಡ ಉಪಸ್ಥಿತರಿದ್ದರು.

Leave a Reply

comments

Related Articles

error: