Uncategorized

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ: ನವೀನ್ ಜಿಂದಾಲ್ ಗೆ ಜಾಮೀನು

ನವದೆಹಲಿ,ಅ.15-ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಆರೋಪಿಗಳಾಗಿರುವ ಕಾಂಗ್ರೆಸ್‌ ಮುಖಂಡ ಹಾಗೂ ಉದ್ಯಮಿ ನವೀನ್‌ ಜಿಂದಾಲ್‌ ಸೇರಿದಂತೆ 14 ಮಂದಿಗೆ ದೆಹಲಿ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಪಡೆದಿರುವವರು 1 ಲಕ್ಷ ರೂ. ವೈಯಕ್ತಿಕ ಕರಾರು ಪತ್ರ ಹಾಗೂ ಅಷ್ಟೇ ಮೌಲ್ಯದ ಶೂರಿಟಿ ನೀಡುವಂತೆ ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಸೂಚಿಸಿದ್ದಾರೆ.

ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್‌ನ ಸಲಹೆಗಾರ ಆನಂದ್ ಗೋಯಲ್, ಮುಂಬೈನ ಎಸ್ಸಾರ್ ಪವರ್‌ ಲಿಮಿಟೆಡ್‌ನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುಶೀಲ್ ಕುಮಾರ್ ಮರೂ, ನಿಹಾರ್ ಸ್ಟಾಕ್ಸ್ ಲಿಮಿಟೆಡ್‌ನ ನಿರ್ದೇಶಕ ಬಿ.ಎಸ್.ಎನ್ ಸೂರ್ಯನಾರಾಯಣನ್, ಮುಂಬೈ ಮೂಲದ ಕೆಇ ಅಂತರರಾಷ್ಟ್ರೀಯ ಮುಖ್ಯ ಆರ್ಥಿಕ ಅಧಿಕಾರಿ ರಾಜೀವ್ ಅಗರ್‌ವಾಲ್ ಮತ್ತು ಗ್ರೀನ್ ಇನ್ಫ್ರಾದ ಉಪಾಧ್ಯಕ್ಷ ಸಿದ್ಧಾರ್ಥ ಮದ್ರಾ ಅವರಿಗೆ ಜಾಮೀನು ನೀಡಲಾಗಿದೆ.

2008 ರಲ್ಲಿ ಜಾರ್ಖಂಡ್‌ನ ಅಮರಕೊಂಡ ಮುರ್ಗದಂಗಲ್ ಕಲ್ಲಿದ್ದಲು ನಿಕ್ಷೇಪವನ್ನು ಜಿಂದಾಲ್‌ ಸ್ಟೀಲ್‌ ಅಂಡ್‌ ಪವರ್‌ ಲಿಮಿಟೆಡ್‌ (ಜೆಎಸ್‌ಪಿಎಲ್‌) ಮತ್ತು ಗಗನ್‌ ಸ್ಪಾಂಜ್‌ ಐರನ್‌ ಪ್ರೈವೇಟ್‌ ಲಿಮಿಟೆಡ್‌ಗೆ (ಜಿಎಸ್‌ಐಪಿಎಲ್‌) ಹಂಚಿಕೆ ಮಾಡುವ ವೇಳೆ ಅವ್ಯವಹಾರ ಎಸಗಿದ ಆರೋಪ ಇವರ ಮೇಲಿದೆ. ಈ ಪ್ರಕರಣದಲ್ಲಿ ಸಿಬಿಐ ಎಲ್ಲ 15 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. (ಎಂ.ಎನ್)

 

Leave a Reply

comments

Related Articles

error: