ಮೈಸೂರು

ಮದ್ಯಪಾನ ಮಾಡಿ ಚಾಲನೆ ಮಾಡದಿರಿ : ವಿಶೇಷ ಮಕ್ಕಳಿಂದ ಅರಿವು

ಮೈಸೂರಿನ ಅರುಣೋದಯ ವಿಕಲ ಚೇತನರು, ಮಕ್ಕಳು ಹಾಗೂ ಪೋಷಕರ ಅಭಿವೃದ್ಧಿ ಸಂಘದ ವತಿಯಿಂದ ಗುರುವಾರ ಹೊಸವರುಷವನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ವಿಶೇಷ ಮಕ್ಕಳಿಂದ ಸಂದೇಶ ನೀಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಮೈಸೂರಿನ ಸಂಸ್ಕೃತ ಪಾಠಶಾಲೆಯ ಬಸವೇಶ್ವರ ವೃತ್ತದಲ್ಲಿ ಅರುಣೋದಯ ವಿಶೇಷ ಶಾಲಾ ಮಕ್ಕಳಿಂದ ಸಾರ್ವಜನಿಕರಿಗೆ ಹೊಸ ವರುಷದ ಆಚರಣೆಯನ್ನು ಮದ್ಯಪಾನ ಮಾಡಿ ಚಾಲನೆ ಮಾಡಬೇಡಿ ಎಂದು ಕರಪತ್ರಗಳನ್ನು ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭ ಪಾಲ್ಗೊಂಡ ನೂರಾರು ವಿಶೇಷ ಮಕ್ಕಳು ಸಾರ್ವಜನಿಕರಿಗೆ ಗುಲಾಬಿ ಹೂ. ನೀಡಿದರು.

ಸಂಸ್ಥೆಯ ಸಂಸ್ಥಾಪಕ ಮ.ವಿ.ಪ್ರಸಾದ್, ಜೋಗಿ ಮಂಜು, ವಿಕ್ರಂ, ಅಜಯ್ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: