
ಮೈಸೂರು
ಕಾರು ಡಿಕ್ಕಿ : ಪಾದಚಾರಿ ಗಂಭೀರ
ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಅತ್ಯಂತ ವೇಗವಾಗಿ ಬಂದ ಕಾರೊಂದು ಗುದ್ದಿದ ಪರಿಣಾಮ, ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಮೈಸೂರಿನ ಕಡಕೊಳ ಬಳಿ ನಡೆದಿದೆ.
ಗಾಯಾಳುವನ್ನು ಕಡಕೊಳ ನಿವಾಸಿ ನಾಯಕ (43) ಎಂದು ಗುರುತಿಸಲಾಗಿದೆ. ಈತ ಕಡಕೊಳ ಬಳಿ ಗುರುವಾರ ಮುಂಜಾನೆ ರಸ್ತೆಯನ್ನು ದಾಟುತ್ತಿದ್ದ ಸಂದರ್ಭ ಕೇರಳದ ಸುಲ್ತಾನ್ ಬತ್ತೇರಿಯಿಂದ ಬರುತ್ತಿದ್ದ ಕಾರು ನಾಯಕ ಅವರಿಗೆ ರಭಸವಾಗಿ ಗುದ್ದಿದೆ. ರಭಸದ ತೀವ್ರತೆಗೆ ನಾಯಕ ಗಂಭೀರವಾಗಿ ಗಾಯಗೊಂಡು ಜೆ.ಎಸ್.ಎಸ್.ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಗುದ್ದಿದ ಶಬ್ದವನ್ನು ಕೇಳಿದ ಸ್ಥಳೀಯರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಮೈಸೂರಿನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.