ಪ್ರಮುಖ ಸುದ್ದಿ

ಸಾಲಬಾಧೆ ತಾಳಲಾರದೇ ಜೆಡಿಎಸ್ ಮುಖಂಡ ನೇಣಿಗೆ ಶರಣು

ರಾಜ್ಯ(ಮಂಡ್ಯ)ಅ.16:- ಸಾಲ ಬಾಧೆ ತಾಳಲಾರದೇ  ಜೆಡಿಎಸ್ ಮುಖಂಡ ನೇಣಿಗೆ ಶರಣಾದ ಘಟನೆ ಮಂಡ್ಯದ ಸ್ವರ್ಣಸಂದ್ರದಲ್ಲಿರೊ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಮಂಡ್ಯದ ಚಿಕ್ಕೇಗೌಡನ‌ದೊಡ್ಡಿ ಬಡಾವಣೆಯ ನಿವಾಸಿ ಲೋಕೇಶ್ (40)ಎಂದು ಗುರುತಿಸಲಾಗಿದ್ದು, ತನ್ನದೇ ಮಹಿಂದ್ರಾ ಟ್ರ್ಯಾಕ್ಟರ್ ಶೋಂ‌ ರೂಂ ನಡೆಸುತ್ತಿದ್ದರು.  ಕಳೆದ ನಗರಸಭೆ ಚುನಾವಣೆಯಲ್ಲಿ ಮಂಡ್ಯದ 34 ನೇ ವಾರ್ಡ್ ನಿಂದ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇವರು ಸಾಲಬಾಧೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮಂಡ್ಯ ಪೂರ್ವ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: