ಮೈಸೂರು

‘ನಾನ್ಯಾರು ಹಾಗೂ ಅಭ್ಯಾಸಗಳು ಮತ್ತು ಆರೋಗ್ಯ’ ಪುಸ್ತಕಗಳ ಲೋಕಾರ್ಪಣೆ ‘ಜ.2’

ಡಾ.ಅನುಪಮ ನಿರಂಜನ್ ಪ್ರಶಸ್ತಿ ಪುರಸ್ಕೃತ, ವೈದ್ಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣನವರ ‘ನಾನ್ಯಾರು ಹಾಗೂ ಅಭ್ಯಾಸಗಳು ಮತ್ತು ಆರೋಗ್ಯ’ ಪುಸ್ತಕಗಳ ಲೋಕಾರ್ಪಣೆಯನ್ನು ಜ.2ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾರಂಭದ ಸಂಯೋಜಕ ಎನ್.ಸಿ.ತಮ್ಮಣ್ಣ ಗೌಡ ತಿಳಿಸಿದರು.

ಗುರುವಾರ, ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 10:30ಕ್ಕೆ ಕೆ.ಆರ್.ಆಸ್ಪತ್ರೆಯ ಆವರಣದ ಫೆಥಾಲಜಿ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಪುಸ್ತಕಗಳನ್ನು ಬಿಡುಗಡೆಗೊಳಿಸುವರು. ವೈದ್ಯಸಾಹಿತಿ ಡಾ.ಕರವೀರ ಪ್ರಭು ಕ್ಯಾಲಕೊಂಡ, ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಪುಸ್ತಕ ಕುರಿತು ಮಾತನಾಡುವರು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಮತ್ತು ಡೀನ್ ಡಾ.ಬಿ.ಕೃಷ್ಣಮೂರ್ತಿ  ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಂ.ಎಂ.ಸಿ ಮತ್ತು ಆರ್.ಐ ಶಿಕ್ಷಕ ಸಂಘದ ಅಧ್ಯಕ್ಷ ಡಾ.ಜಿ.ಆರ್.ಜಗನ್ನಾಥ ಬಾಬು, ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆಯ ಡಾ.ಬಸವನಗೌಡ ವಹಿಸುವರು ಎಂದು ತಿಳಿಸಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ಶಿಕ್ಷಕರ ಸಂಘ, ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆ ಮತ್ತು ತಾಯಮ್ಮ ಪ್ರಕಾಶನ, ಆರೋಗ್ಯ ಯೋಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಜಿ.ಆರ್.ಜಗನ್ನಾಥ ಬಾಬು ಮತ್ತು ಆರ್.ರಂಗಸ್ವಾಮಿ ಉಪಸ್ಥಿತರಿದ್ದರು.

Leave a Reply

comments

Related Articles

error: