ಮೈಸೂರು

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಪುಣ್ಯಸ್ಮರಣೆ-ರಸಮಂಜರಿ ಕಾರ್ಯಕ್ರಮ ‘ಜ.1’

ಖ್ಯಾತ ಚಲನಚಿತ್ರ ನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 8ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಮೈಸೂರಿನ ಪಾತಿ ಫೌಂಡೇಷನ್ ಹಾಗೂ ಸಾಹಸ ಸಿಂಹ ಡಾ.ವಿಷ್ಣವರ್ಧನ್ ಅಭಿಮಾನಿ ಬಳಗದಿಂದ ವಿಷ್ಣುವರ್ಧನ್ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಎಂ.ಡಿ.ಪಾರ್ಥಸಾರತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುರುವಾರ, ಪತ್ರಕರ್ತರ ಭವನದಲ್ಲಿ ಈ ಬಗ್ಗೆ ಮಾತನಾಡಿ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಜ.1ರ ಸಂಜೆ 6ಗಂಟೆಗೆ ರಸಮಂಜರಿ ಕಾರ್ಯಕ್ರಮಕ್ಕೆ ಯೋಗಾನರಸಿಂಹಸ್ವಾಮಿ ದೇವಾಲಯದ ಡಾ.ಭಾಷ್ಯಂ ಸ್ವಾಮೀಜಿ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಸಮಾಜ ಸೇವಕ ವೆಂಕಟರಾಮು, ಮಹಾಪೌರ ರವಿಕುಮಾರ್ ಭಾಗವಹಿಸುವರು. ಮೇಲುಕೋಟೆಯ ವಂಗಿಪುರಂ ನಂಬಿಮಠದ ಸ್ವಾಮೀಜೀ ಇಳೈ ಆಳ್ವಾರ್ ಸಾನಿಧ್ಯ ವಹಿಸುವರು. ಚಲನಚಿತ್ರ ನಟರಾದ ಮಜಾ ಟಾಕೀಸ್ ಖ್ಯಾತಿಯ ಪವನ್, ಮಂಡ್ಯ ರಮೇಶ್, ಜೂನಿಯರ್ ವಿಷ್ಣುವರ್ಧನ್, ಸಿಂಹ ಹಾಕಿದ ಹೆಜ್ಜೆ ನಾಯಕ-ನಾಯಕಿಯರಾದ ಪ್ರೀತಮ್ ಮತ್ತು ಅಮೃತ  ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಪುಣ್ಯ ಸ್ಮರಣೆಯಂಗವಾಗಿ ಡಿ.30ರಂದು ಅನ್ನದಾನವನ್ನು ಹಮ್ಮಿಕೊಳ್ಳಲಾಗಿದೆ. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಶರೀರ ಹೋಗಿರಬಹುದು ಅವರ ‘ಆತ್ಮ’ ಅಭಿಮಾನಿಗಳ ಹೃದಯದಲ್ಲಿ ವಿರಾಜಿಸುತ್ತಿದೆ. ಅವರ ಕಟ್ಟಾಭಿಮಾನಿಯಾದ ನಾನು ಪಾತಿ ಫೌಂಡೇಷನ್ ವತಿಯಿಂದ ನಿರ್ಮಿಸಲಾಗಿರುವ ಹಾಗೂ ಜನವರಿಯಲ್ಲಿ ಬಿಡುಗಡೆಗೊಳ್ಳುತ್ತಿರುವ ‘ಸಿಂಹ ಹಾಕಿದ ಹೆಜ್ಜೆ’ ಚಿತ್ರವನ್ನು ವಿಷ್ಣುವರ್ಧನ್ ಅವರಿಗೆ ಅರ್ಪಿಸಲಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಷ್ಣುವರ್ಧನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಮಂಜು ವಿ.ಕೆ. ಪ್ರಧಾನ ಕಾರ್ಯದರ್ಶಿ ಮಾರತಿ.ಜಿ, ಸಾಹಸ ನಿರ್ದೇಶಕ ವಿಕ್ರಮ್ ಹಾಗೂ ಅಭಿಮಾನಿ ಪಾಪು ಉಪಸ್ಥಿತರಿದ್ದರು.

Leave a Reply

comments

Related Articles

error: