ಮೈಸೂರು

ವಿದ್ಯುತ್ ಪ್ರವಹಿಸುವ ತಂತಿ ಸ್ಪರ್ಶಿಸಿ ಟ್ರೈನಿ ಸಾವು

ಮೈಸೂರು,ಅ.16:- ವಿದ್ಯುತ್ ಪ್ರವಹಿಸುತ್ತಿದೆಯೋ ಇಲ್ಲವೋ ಎಂಬುದನ್ನು ಸರಿಯಾಗಿ ಪರಿಶೀಲನೆ ಮಾಡದೇ ವಿದ್ಯುತ್ ತಂತಿ ದುರಸ್ತಿಗೆ ಮುಂದಾದ ಟ್ರೈನಿಯೋರ್ವರು ವಿದ್ಯುದಾಘಾತದಿಂದ ಸಾವನ್ನಪ್ಪಿದ ಘಟನೆ ಕಡಕೊಳದಲ್ಲಿ ನಡೆದಿದೆ.

ಮೃತರನ್ನು ಗುಲ್ಬರ್ಗಾ ಮೂಲದ ಬಸವರಾಜು(28)ಎಂದು ಗುರುತಿಸಲಾಗಿದೆ. ಇವರು ಕೆಇಬಿಯಲ್ಲಿ ಟ್ರೈನಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಡಕೊಳಕ್ಕೆ ವಿದ್ಯುತ್ ತಂತಿ ದುರಸ್ತಿಗೆಂದು ತೆರಳಿದ ವೇಳೆ ವಿದ್ಯುತ್ ಪ್ರವಹಿಸುತ್ತಿದೆಯೋ ಇಲ್ಲವೋ ಎಂದು ಸರಿಯಾಗಿ ಪರಿಶೀಲನೆ ನಡೆಸದೇ ತಂತಿ ಸ್ಪರ್ಶಿಸಿದ್ದರಿಂದ ವಿದ್ಯುತ್ ಶಾಕ್ ಹೊಡೆದು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಕಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್,ಎಚ್)

Leave a Reply

comments

Related Articles

error: