ದೇಶ

ಕಾಲುವೆಗೆ ಉರುಳಿದ ಬಸ್: 5 ಸಾವು, 20 ಮಂದಿಗೆ ಗಾಯ

ಹೂಗ್ಲಿ,.16-ಬಸ್ ವೊಂದು ಸೇತುವೆಯಿಂದ ಕಾಲುವಿಗೆ ಉರುಳಿ ಬಿದ್ದ ಪರಿಣಾಮ 5 ಮಂದಿ ಸಾವನ್ನಪ್ಪಿ 20 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಹರಿಪಾಲ್ನಲ್ಲಿ ನಡೆದಿದೆ.

ಕೋಲ್ಕತಾಕ್ಕೆ ತೆರಳುತ್ತಿದ್ದ ಬಸ್ ಬೆಳಿಗ್ಗೆ 9 ಸುಮಾರಿಗೆ ಸೇತುವೆಯ ಸಿಮೆಂಟ್ ಬೇಲಿಗೆ ಡಿಕ್ಕಿ ಹೊಡೆದು ದಕಾಟಿಯ ಖಾಲ್ ಕಾಲುವೆಗೆ ಉರುಳಿಬಿದ್ದಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸುಕೇಶ್ ಜೈನ್ ತಿಳಿಸಿದ್ದಾರೆ.

20 ಮಂದಿ ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಹರಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರಕ್ಷಣಾಕಾರ್ಯಾಚರಣೆ ನಡೆಯುತ್ತಿದ್ದು, ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಕಳುಹಿಸಲಾಗಿದೆ. ಸ್ಥಳೀಯರು ಹಾಗೂ ಪೊಲೀಸರು ಬಸ್ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. (ಎಂ.ಎನ್)

Leave a Reply

comments

Related Articles

error: