
Uncategorized
ಅ.22ರ ಕಂದಾಯ, ಪಿಂಚಣಿ ಅದಾಲತ್ ಸಮಯದಲ್ಲಿ ಬದಲಾವಣೆ
ಹಾಸನ (ಅ.17): ಅರಸೀಕೆರೆ ತಾಲ್ಲೂಕಿನ ಜಾವಗಲ್ ಹಾಗೂ ಬಾಣಾವರ ಹೋಬಳಿಯಲ್ಲಿ ಕಂದಾಯ ಅದಾಲತ್ ನಡೆಸುವ ಬಗ್ಗೆ ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿತ್ತು. ಅದರೆ ಅ.22 ರಂದು ಹಾನಸಾಂಬ ಜಾತ್ರಾ ಮಹೊತ್ಸವದ ಟೆಂಡರ್ ಪ್ರಕ್ರಿಯೆ ಇರುವುದರಿಂದ ವೇಳಾಪಟ್ಟಿಯಲ್ಲಿನ ಸಮಯದಲ್ಲಿ ಮಾತ್ರ ಅಲ್ಪ ಬದಲಾವಣೆ ಮಾಡಲಾಗಿದೆ.
ಅರಸೀಕೆರೆ ತಾಲ್ಲೂಕಿನಲ್ಲಿ ಅ.22 ರಂದು ಬೆಳಗ್ಗೆ 2 ಗಂಟೆಗೆ ಜಾವಗಲ್ ನಾಡ ಕಚೇರಿಯಲ್ಲಿ ಮತ್ತು ಅ. 22 ರಂದು ಸಂಜೆ 5 ಗಂಟೆಗೆ ಬಾಣಾವರ ನಾಡ ಕಚೇರಿಯಲ್ಲಿ ನಡೆಯಲಿದೆ ಎಂದು ಹಾಸನ ಉಪವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜ್ ಅವರು ತಿಳಿಸಿದ್ದಾರೆ. (ಎನ್.ಬಿ)