
Uncategorized
ಬಾಲಕಿ ಮೇಲೆ ಅತ್ಯಾಚಾರ: ತಂದೆ ಸಮ್ಮುಖದಲ್ಲೇ ಮರಣದಂಡನೆ
ಲಾಹೋರ್ (ಅ.17): ಪಾಕಿಸ್ತಾನದಲ್ಲಿ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ವ್ಯಕ್ತಿನ್ನು ಬುಧವಾರ ಗಲ್ಲಿಗೇರಿಸಲಾಗಿದೆ.
ಶಿಕ್ಷೆಗೀಡಾದ ವ್ಯಕ್ತಿ ಸರಣಿ ಹಂತಕ ಎಂಬುದು ತಿಳಿದುಬಂದಿದೆ. ಲಾಹೋರ್ನಿಂದ 50 ಕಿ.ಲೋ. ಮೀಟರ್ ದೂರದಲ್ಲಿರುವ ಕಾಸೌರ್ ನಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪದಡಿಯಲ್ಲಿ ಇಮ್ರಾನ್ ಅಲಿ ದೋಷಿ ಎಂದು ಪಾಕಿಸ್ತಾನ ಕೋರ್ಟ್ ಆದೇಶ ನೀಡಿತ್ತು. ಇಂದು ಬೆಳಗ್ಗೆ ಕೋಟ್ ಲಾಕ್ಪತ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು ಎಂದು ವರದಿ ಹೇಳಿದೆ.
ಬಾಲಕಿಯ ತಂದೆ, ಚಿಕ್ಕಪ್ಪ ಹಾಗೂ ಮ್ಯಾಜಿಸ್ಟ್ರೇಟ್ ಅದಿಲ್ ಸರ್ವಾರ್ ಸಮ್ಮುಖದಲ್ಲಿ ಅಪರಾಧಿಯನ್ನು ನೇಣಿಗೆ ಏರಿಸಲಾಯಿತು ಎಂದು ದಿ ಡಾನ್ ವರದಿ ವರದಿ ಮಾಡಿದೆ. (ಎನ್.ಬಿ)