ಪ್ರಮುಖ ಸುದ್ದಿಮೈಸೂರು

ರಾಜಮಾತೆ ಪ್ರಮೋದಾದೇವಿ ಅವರಿಗೆ ಮಾತೃ ವಿಯೋಗ

ಮೈಸೂರು,ಅ.19:- ಮೈಸೂರು  ರಾಜಮಾತೆ ಪ್ರಮೋದಾದೇವಿ ಅವರ ಮಾತೃಶ್ರೀಯವರಾದ ಪುಟ್ಟರತ್ನಮ್ಮಣ್ಣಿ(98) ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಪುಟ್ಟರತ್ನಮ್ಮಣ್ಣಿ(98) ಅವರು ವಯೋಸಹಜ ಖಾಯಿಲೆಯಿಂದ  ಬಳಲುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟಚಿನ್ನಮ್ಮಣ್ಣಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ   ಕೊನೆಯುಸಿರೆಳೆದಿದ್ದಾರೆ.

ಇದರಿಂದ ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಸಾಂಪ್ರದಾಯಿಕ ಆಚರಣೆಗಳ ಮೇಲೆ ಕರಿನೆರಳು ಬೀಳುವ ಸಾಧ್ಯತೆ ಇದೆ. ಇಂದು ಅರಮನೆಯಲ್ಲಿ ವಿಜಯದಶಮಿ ಕೊನೆ ದಿನದ ಕಾರ್ಯಕ್ರಮಗಳು ನಡೆಯುತ್ತಿವೆ.

ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿಯವರಿಂದ ಸಂತಾಪ

ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಮಾತೃಶ್ರೀ ಪುಟ್ಟರತ್ನಮ್ಮಣ್ಣಿ ನಿಧನಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಮಾತೃಶ್ರೀ ಪುಟ್ಟರತ್ನಮ್ಮಣ್ಣಿ (98) ನಿಧನದ ಸುದ್ದಿ ಕೇಳಿ ದುಖ: ಉಂಟಾಗಿದೆ. ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಾರ್ಥಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: