ಪ್ರಮುಖ ಸುದ್ದಿಮೈಸೂರು

ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಮಾತೃವಿಯೋಗ ಹಿನ್ನೆಲೆ : ರಾಜವಂಶಸ್ಥರು ನಡೆಸುವ ಕಾರ್ಯಕ್ರಮಗಳು ಮುಂದೂಡಿಕೆ

ಮೈಸೂರು,ಅ.19:- ರಾಜ ಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಮಾತೃಶ್ರೀಯವರ‌ ನಿಧನದ ಹಿನ್ನಲೆಯಲ್ಲಿ  ಅರಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸೂತಕದ ಛಾಯೆಯಿದ್ದು ಮೈಸೂರು ರಾಜವಂಶಸ್ಥರು ವಿಜಯದಶಮಿ ಪ್ರಯುಕ್ತ ಅರಮನೆಯಲ್ಲಿ  ನಡೆಸುವ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ರಾಜ ವಂಶಸ್ಥೆ ಪ್ರಮೋದಾದೇವಿ  ಅವರ ಮಾತೃಶ್ರೀಯವರ ನಿಧನದ ಹಿನ್ನೆಲೆಯಲ್ಲಿ ಮೈಸೂರು ಅರಮನೆ ದಶಮಿ ಕಾರ್ಯಕ್ರಮಗಳನ್ನು ಅಕ್ಟೋಬರ್ 22ಕ್ಕೆ ಮುಂದೂಡಲಾಗಿದೆ.

ಬೆಳಗ್ಗೆ 9.25ರಿಂದ 9.35ರೊಳಗೆ ಉತ್ತರ ಪೂಜೆ,ಖಾಸ್ ಆಯುಧಗಳಿಗೆ ಉತ್ತರ ಪೂಜೆ ನೆರವೇರಲಿದ್ದು, ಅರಮನೆಯ ಕಲ್ಯಾಣ ಮಂಟಪದಲ್ಲಿ ಪೂಜೆ ನಡೆಯಲಿದೆ. ಬೆಳಗ್ಗೆ 10.05ರಿಂದ 10.25ಕ್ಕೆ ಆಯುಧಗಳು ನಿರ್ಗಮಿಸಲಿದ್ದು, ಶ್ರೀ ಭುವನೇಶ್ವರಿ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ವಜ್ರಮುಷ್ಠಿ ಕಾಳಗ ನಡೆಯಲಿದ್ದು,ಬೆಂಗಳೂರು, ಚಾಮರಾಜನಗರ, ಮೈಸೂರಿನ ಜಟ್ಟಿಗಳಿಂದ ಕುಸ್ತಿ ನಡೆಯಲಿದೆ. ಜಟ್ಟಿಗಳು ವಜ್ರ ಮುಷ್ಠಿ ಹಿಡಿದು ಮಟ್ಟಿ ಮೇಲೆ ಕುಸ್ತಿ ಮಾಡಲಿದ್ದಾರೆ.  ಜಟ್ಟಿಗಳ ತಲೆಯಿಂದ ರಕ್ತ ಚಿಮ್ಮಿದ ಮೇಲೆ ವಿಜಯ ಯಾತ್ರೆ ನಡೆಯಲಿದೆ. ಬೆಳ್ಳಿ ರಥದಲ್ಲಿ ಮಹಾರಾಜ ಯದುವೀರ್ ವಿಜಯ ಯಾತ್ರೆ ಮಾಡಲಿದ್ದು, ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ವಿಜಯ ಯಾತ್ರೆ ನಂತರ ಶ್ರೀ ಚಾಮುಂಡೇಶ್ವರಿ ಪ್ರತಿಮೆ ಸ್ಥಳಾಂತರಗೊಳ್ಳಲಿದೆ. ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ಸ್ಥಳಾಂತರಗೊಳ್ಳಲಿದೆ. ಇದೀಗ ಎಲ್ಲಾ ಕಾರ್ಯಕ್ರಮಗಳನ್ನು  ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: