ಪ್ರಮುಖ ಸುದ್ದಿಮೈಸೂರು

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ : ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅರ್ಜುನ

ಮೈಸೂರು,ಅ.19:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ  ಮನೆಮಾಡಿತ್ತು. ಇಂದು ಬೆಳಿಗ್ಗೆ ಅರಮನೆಯ ಕಾರ್ಯಕ್ರಮಗಳು ರದ್ದಾದರೂ ಸರ್ಕಾರಿ ಕಾರ್ಯಕ್ರಮಗಳು ಎಂದಿನಂತೆ ನೆರವೇರಿದವು.

ಬೆಳಿಗ್ಗೆ 11 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆಯಾದ ಬಳಿಕ ನಂತರ ಮೈಸೂರಿನ ಅರಮನೆಯತ್ತ ತರಲಾಯಿತು. ಮಧ್ಯಾಹ್ನ 2.15 ಕ್ಕೆ  750 ಕೆಜಿ ತೂಕದ ಚಿನ್ನದ ಅಂಬಾರಿ ಯೊಳಗೆ ಚಾಮುಂಡಿ ಬೆಟ್ಟದಿಂದ ತಂದ ಚಾಮುಂಡೇಶ್ವರಿ ತಾಯಿ ವಿಗ್ರಹವನ್ನು ಕೂರಿಸಿ ಪೂಜಿಸಲಾಯಿತು.  3.5 ಕ್ಕೆ ಕುಂಭ ಲಗ್ನದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಮೆರವಣಿಗೆಗೆ ಸಿಎಂ ಕುಮಾರಸ್ವಾಮಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ದಸರಾ ಮೆರವಣಿಗೆಯಲ್ಲಿ ಕಂಸಾಳೆ, ಡೊಳ್ಳು ಕುಣಿತ, ಹುಲಿ ವೇಷ,  ಪೂಜಾ ಕುಣಿತ , ಗೊರವನ ಕುಣಿತ, ವೀರಭದ್ರ ಕುಣಿತ, ಗಾರುಡಿ ಗೊಂಬೆ , ಚಂಡೆಮೇಳ,ಜಗ್ಗಲಿಗೆ ಮೇಳಾ , ನಾದಸ್ವರ, ಮರಗಾಲು ನೃತ್ಯ, ವೀರಗಾಸೆ ನೃತ್ಯ, ಕೋಲಾಟ, ಬಯಲಾಟ ಸೇರಿದಂತೆ 60 ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ನೆರೆದಿದ್ದ ಪ್ರೆಕ್ಷಕರಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಹಲವಾರು ಕಲೆಗಳನ್ನು ಪ್ರದರ್ಶಿಸಿದರು. ಜೊತೆಯಲ್ಲಿ 42ಸ್ತಭ್ದ ಚಿತ್ರಗಳು ಪಾಲ್ಗೊಂಡಿದ್ದವು. ಕಲೆ ಮತ್ತು ವಾಸ್ತುಶಿಲ್ಪ, ಪ್ರವಾಸೋದ್ಯಮ, ಹಬ್ಬ ಹರಿದಿನಗಳು, ಅಂತರ್ ಜಲ ಹಾಗೂ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಸ್ತಬ್ಧ ಚಿತ್ರಗಳು ಬೆಳಕು ಚೆಲ್ಲಿದವು.
ಸ್ತಬ್ಧಚಿತ್ರಗಳು ಆಯಾ ಜಿಲ್ಲೆಗಳ ಇಲಾಖೆಯ ಯಶೋಗಾಥೆ ಸಾರಿದವು. ಮೈಸೂರು ಜಿಲ್ಲಾ ಪಂಚಾಯಿತಿಯಿಂದ ಬೈಲುಕುಪ್ಪೆಯಲ್ಲಿರುವ ಗೋಲ್ಡನ್ ಟೆಂಪಲ್ ಸ್ತಬ್ಧಚಿತ್ರ , ಬಾಗಲಕೋಟೆಯಿಂದ ಪಟ್ಟದ ಕಲ್ಲು-ಕಾಯಕವೇ ಕೈಲಾಸ-ಕೂಡಲಸಂಗಮ, ಬೆಂಗಳೂರು ಗ್ರಾಮಾಂತರದಿಂದ ಜಿಲ್ಲೆಯ ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ದೇವಾಲಯ ಮತ್ತು ದೇವಹನಹಳ್ಳಿ ಕೋಟೆ, ಬೆಂಗಳೂರು ನಗರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ, ರಾಷ್ಟ್ರೀಯ ಕೆಡೆಟ್ ಕ್ರಾಫ್ಸ್ (ಎನ್ ಸಿಸಿ) ಪ್ರವಾಹ ಸಂತ್ರಸ್ತರಿಗೆ ನೆರವು ಮತ್ತು ಕ್ರೀಡೆಗಳು, ಉನ್ನತ ಶಿಕ್ಷಣ ಇಲಾಖೆ ವಿದ್ಯಾನಿಲಯಗಳು ನಡೆದು ಬಂದ ದಾರಿ, ಬೆಳಗಾವಿ ಕಿತ್ತೂರಿನ ವೈಭವ, ಬಳ್ಳಾರಿ ಬಳ್ಳಾರಿ ತುಂಗಾಭದ್ರ ಜಲಾಶಯ, ಬೀದರ್ ಅನುಭವ ಮಂಟಪ ಬಸವಕಲ್ಯಾಣ, ಪ್ರವಾಸೋದ್ಯಮ ಇಲಾಖೆ ಒಂದು ರಾಜ್ಯ ಹಲವು ಜಗತ್ತುಗಳು, ವಿಜಯಪುರ ಗೋಲ್ ಗುಂಬಜ್, ಚಾಮರಾಜನಗರ ಅರಣ್ಯ ಸಂಪತ್ತಿನೊಳಗಿನ ಆಧ್ಯಾತ್ಮಿಕ ಕ್ಷೇತ್ರಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕದ ನವರತ್ನಗಳು, ಚಿತ್ರದುರ್ಗ ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿಗಳು ನಾಯಕಪಟ್ಟಿ ಪುಣ್ಯಕ್ಷೇತ್ರ, ಚಿಕ್ಕಮಗಳೂರು ಭೂತಾಯಿ ಕಾಫಿಕನ್ಯೆ, ಚಿಕ್ಕಬಳ್ಳಾಪುರ ವಿಧುರಾಶ್ವಥ ಪುಣ್ಯಕ್ಷೇತ್ರ, ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾನೂನು ಸೇವೆಗಳು, ದಾವಣಗೆರೆ ಸ್ಮಾರ್ಟ್ ಸಿಟಿಯತ್ತ ದಾವಣಗೆರೆ, ದಕ್ಷಿಣ ಕನ್ನಡ ಕೋಟಿ ಚೆನ್ನಯ್ಯ ತುಳುನಾಡ ವೀರರು, ಧಾರವಾಡ ದ.ರಾ.ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ-ಧಾರವಾಡ, ವಾರ್ತಾ ಇಲಾಖೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ಗದಗ ಮರಗಳ ಮರು ನೆಡುವಿಕೆ, ಕಲ್ಬುರ್ಗಿ- ಕಲ್ಬುರ್ಗಿ ವಿಮಾನ ನಿಲ್ದಾಣ, ಹಾಸನ ಹೊಯ್ಸಳ ನಾಡಿನ ಬೇಲೂರು ಶಿಲ್ಪಗಳ 900ರ ಸಂಭ್ರಮ, ಕಾವೇರಿ ನೀರಾವರಿ ನಿಗಮ ನಾವು ಜಲವನ್ನು ಉಳಿಸಿದರೆ ಜಲವು ನಮ್ಮನ್ನು ಉಳಿಸುವುದು, ಹಾವೇರಿ ರಾಣೀಬೆನ್ನೂರು ಕೃಷ್ಣಮೃಗ ಅಭಯಾರಣ್ಯ-ಬಂಕಾಪುರ ನವಿಲುಧಾಮ, ಕೋಲಾರ ಜಿಲ್ಲಾ ಪಂಚಾಯಿತಿ ನಡೆ ಗ್ರಾಮದ ಅಭಿವೃದ್ಧಿಯ ಕಡೆ, ಕೊಪ್ಪಳ ಶ್ರೀಕನಕಾಚಲ ದೇವಸ್ಥಾನ ಮತ್ತು ಐತಿಹಾಸಿಕ ಬಾವಿ ಕನಕಗಿರಿ, ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ನಮ್ಮ ಮತ ನಮ್ಮ ಹಕ್ಕು, ಮಂಡ್ಯ ಮಂಡ್ಯ ಜಿಲ್ಲೆಗೆ ನಾಲ್ವಡಿಯವರ ಪ್ರಮುಖ ಕೊಡುಗೆ (ಕೆಆರ್ ಎಸ್ ಅಣೆಕಟ್ಟೆ), ಮೈಸೂರು ಗೋಲ್ಡನ್ ಟೆಂಪಲ್ ಬೈಲುಕುಪ್ಪೆ, ರಾಯಚೂರು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ-ಯರಮರಸ್, ರಾಮನಗರ ಭಕ್ತಿ-ನಂಬಿಕೆ ಕರಕುಶಲ ಇತಿಹಾಸ ಸಂಗಮ, ಶಿವಮೊಗ್ಗ ಬಿದನೂರು ಶಿವಪ್ಪನಾಯಕ ಸಾಧನೆ, ತುಮಕೂರು ಶತಮಾನಕಂಡ ಮಹಾಸಂತ ಡಾ.ಶ್ರೀ ಶಿವಕುಮಾರಸ್ವಾಮೀಜಿ, ಸ್ತಬ್ಧಚಿತ್ರ ಉಪಸಮಿತಿ ಭಾರತ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಆಡಳಿತ ವಿಕೇಂದ್ರೀಕರಣ, ಉಡುಪಿ ಪರಶುರಾಮ ಸೃಷ್ಟೀಯ ತುಳುನಾಡು, ಉತ್ತರ ಕನ್ನಡ ಸಿದ್ದಿ ಜನಾಂಗ ಹಾಗೂ ಪ್ರವಾಸಿ ತಾಣ ಯಾಣ, ಯಾದಗಿರಿ ಬಂಜಾರ ಸಂಸ್ಕೃತಿ, ಆರೋಗ್ಯ ಆರೋಗ್ಯ ಇಲಾಖೆಯ ಸೇವೆಗಳು ಹೀಗೆ ಎಲ್ಲಾ ಸ್ತಭ್ದ ಚಿತ್ರಗಳು ಆಯಾ ಜಿಲ್ಲೆಯನ್ನು ಪ್ರತಿನಿಧಿಸಿದವು.

ಮಧ್ಯಾಹ್ನ 4.05ರಿಂದ 4.35ರೊಳಗಿನ ಕುಂಭ ಲಗ್ನದಲ್ಲಿ ಅರಮನೆ ಮುಂಭಾಗ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಚಾಮುಂಡೇಶ್ವರಿ ತಾಯಿ ವಿಗ್ರಹಕ್ಕೆ ಮುಖ್ಯಮಂತ್ರಿ .ಡಿ.ಕುಮಾರಸ್ವಾಮಿಯವರು ಪುಷ್ಪಾರ್ಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಇಪ್ಪತ್ತೊಂದು ಸುತ್ತಿನ ಕುಶಲತೋಪು ಸಿಡಿಸಲಾಯಿತು. ಈ ಬಾರಿ ಅಂಬಾರಿ ಹೊತ್ತ ಅರ್ಜುನ ಬರೋಬ್ಬರಿ 6110ಕೆಜಿ ತೂಕ ಹೊಂದಿದ್ದು , ಕಾಡಿನಿಂದ ಅರಮನೆಗೆ ಬಂದು ಒಂದು ತಿಂಗಳಲ್ಲಿ 450ಕ್ಕೂ ಹೆಚ್ಚು ತೂಕ ಜಾಸ್ತಿಯಾಗಿದ್ದಾನೆ. ಬಲರಾಮ ನಿಶಾನೆಯಾಗಿ ಅಭಿಮನ್ಯು ನೌಫತ್ ಆನೆಯಾಗಿವಿಜಯ ಪ್ರಶಾಂತ, ಧನಂಜಯ, ದ್ರೋಣ, ಚೈತ್ರ, ಗೋಪಿ ಸಾಲಾನೆಗಳಾಗಿ, ವಿಕ್ರಮ ಪಟ್ಟದ ಆನೆಯಾಗಿ, ವರಲಕ್ಷ್ಮಿ ಅರ್ಜುನನ ಎಡಕ್ಕೆ, ಕಾವೇರಿ ಅರ್ಜುನನ ಬಲಕ್ಕೆ ಸಾಗಿ ಬಂದವು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: