ಮೈಸೂರು

ಜಂಬೂಸವಾರಿ ತಂಡದ ನಾಯಕ ಅರ್ಜುನ ಇಂದು ರಿಲ್ಯಾಕ್ಸ್ ಮೂಡ್ ನಲ್ಲಿ

ಮೈಸೂರು,ಅ.20:-ಕಳೆದ ಹತ್ತು ದಿನಗಳಿಂದ  ವಿಶ್ವವಿಖ್ಯಾತ ನಾಡಹಬ್ಬ ದಸರಾ ನಡೆದಿದ್ದು, ಯಶಸ್ವಿಯಾಗಿದೆ. ದಸರಾ ಆರಂಭಕ್ಕೂ ಮುನ್ನವೇ ಆಗಮಿಸಿದ್ದ ಗಜಪಡೆ ತಾಲೀಮು ನಡೆಸುತ್ತಿತ್ತು.

ಲಕ್ಷಾಂತರ ಮಂದಿ ಪ್ರವಾಸಿಗರ ಕೇಂದ್ರಬಿಂದುವಾಗಿದ್ದ ಜಂಬೂಸವಾರಿ ತಂಡದ ನಾಯಕ ಅರ್ಜುನ ಇಂದು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾನೆ. ಮೈಸೂರಿನ ಅರಮನೆಯ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಸತತ ಏಳು ಬಾರಿ ಯಶಸ್ವಿಯಾಗಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ಅರ್ಜುನ ತನಗೆ ಬಳಿಯಲಾದ ಬಣ್ಣಗಳನ್ನು ಕಳೆದು  ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾನೆ. ದಸರಾ ಯಶಸ್ವಿಯಾಗಿರುವುದಕ್ಕೆ ತಾಯಿ ಚಾಮುಂಡೇಶ್ವರಿಗೆ ಅರ್ಜುನನ ಸಾರಥಿ ವಿನು ಕೃತಜ್ಞತೆ ಅರ್ಪಿಸಿದ್ದಾರೆ. ನಾನು ಅರ್ಜುನ ನಿಗೆ ಎರಡನೇ ಬಾರಿ ಸಾರಥಿಯಾಗಿ ಅಂಬಾರಿ ಮುನ್ನಡೆಸಿದ್ದಿ ಖುಷಿಯಾಗಿದೆ. ಇದಕ್ಕೆಲ್ಲಕ್ಕೂ ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೇ ಕಾರಣ. ನಿಗದಿತ ಸಮಯಕ್ಕೆ ನಾವು ಗುರಿ ತಲುಪಿದ್ದೇವೆ. ಅಂಬಾರಿ ನಡೆಸುವ ವೇಳೆ ಯಾವುದೇ ತೊಂದರೆಯಾಗಿಲ್ಲ. ಅಂಬಾರಿ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ನಾಯಕ ಅರ್ಜುನನ ಜೊತೆ ಇತರ ಆನೆಗಳೂ ಕೂಡ ರಿಲ್ಯಾಕ್ಸ್ ಮೂಡ್ ನಲ್ಲಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: