ಮೈಸೂರು

ಕೆರೆಯಲ್ಲಿ ಬಿದ್ದು ವ್ಯಕ್ತಿ ಸಾವು

ಮೈಸೂರು,ಅ.20:- ಮೈಸೂರು ಜಿಲ್ಲೆ ಹುಣಸೂರು ತಾಲೂಕು ಹೊನ್ನಿಕುಪ್ಪೆ ಗ್ರಾಮದ ಕೆಂಚನಕೆರೆಯಲ್ಲಿ  ವ್ಯಕ್ತಿಯೋರ್ವ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೊನ್ನಿಕುಪ್ಪೆ ಗ್ರಾಮದ ನಿವಾಸಿ   ಪುಟ್ಟೇಗೌಡರ ಮಗ ಸುಮಾರು 45 ರ ಹರೆಯದ  ಸೋಮೇಶ್ ಎಂಬಾತ ನಿನ್ನೆ ಬೆಳಿಗ್ಗೆ 8.30 ರ ಸುಮಾರಿಗೆ ಪಕ್ಕದಲ್ಲಿರುವ ಕೆಂಚನಕೆರೆಗೆ ಬಿದ್ದು ಸಾವನ್ನಪ್ಪಿದ್ದು, ಕಾಲು ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.  ಪೊಲೀಸರು ದೋಣಿಯ ಸಹಾಯದಿಂದ ಮೃತದೇಹದ ಪತ್ತೆಗಾಗಿ ಶೋಧ  ನಡೆಸುತ್ತಿದ್ದಾರಾದರೂ, ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: